ಮಡಿಕೇರಿ ಮೇ ೨೭: ಕೊರೊನಾ ನಿಯಂತ್ರಣಕ್ಕೆ ನಾನಾ ರೀತಿಯಲ್ಲಿ ಸರಕಾ ರದಿಂದ ಪರಿಹಾ ರೋಪಾಯ ಕೈಗೊಳ್ಳ ಲಾಗುತ್ತಿದೆ. ಆಯುಷ್ ಇಲಾಖೆಯಿಂದ ಸೋಂಕಿ ತರಿಗೆ ಆಯುರ್ವೇದ ಮಾತ್ರೆ ಗಳನ್ನು ನೀಡಲಾಗುತ್ತಿದೆ. ಕೋವಿಡ್ ವೈರಸ್ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿಸಿ ಸಾವಿಗೆ ಕಾರಣವಾಗುತ್ತಿದೆ.
ರೋಗ ನಿರೋಧಕ ಶಕ್ತಿ ವೃದ್ಧಿಗೆ ಆಯುಷ್ ಪದ್ಧತಿಯಲ್ಲಿ ಅನೇಕ ಔಷಧಗಳಿವೆ. ಕೊರೊನಾ ವೈರಾಣು ಪಸರಿಸಿದ ಬಳಿಕ ಆಯುಷ್ ಪದ್ಧತಿಯ ಮಹತ್ವ ಮತ್ತಷ್ಟೂ ಹೆಚ್ಚಿದೆ. ಜನರು ಮನೆಯಲ್ಲಿ ಕಷಾಯ ಹಾಗೂ ಕೆಲವು ಆಯುಷ್ ಔಷಧಿಗಳನ್ನು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸುತ್ತಿದ್ದಾರೆ.
ಕೊರೊನಾ ಮೊದಲನೇ ಅಲೆಯಲ್ಲಿ ತಜ್ಞರ ಸಲಹೆಯಂತೆ ಆಯುಷ್ ಔಷಧಿಗಳು ಪರಿಣಾಮಕಾರಿ ಯಾಗಿ ಕಂಡು ಬಂದಿರುವುದರಿAದ ಕೋವಿಡ್ ಎರಡನೇ ಅಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನ್ ಸೋಂಕಿತರಿಗೆ ಆಯುಷ್ ಇಲಾಖೆ ರಾಷ್ಟಿçÃಯ ಆಯುಷ್ ಅಭಿಯಾನ ದಡಿಯಲ್ಲಿ ಔಷಧ ವಿತರಣೆಗೆ ಮುಂದಾಗಿದ್ದು, ಕೊಡಗು ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಆಯುಷ್-೬೪ (ಟ್ಯಾಬ್), ಅಶ್ವಗಂಧ ಚೂರ್ಣ, ಚ್ಯವನಪ್ರಾಶ ಲೇಹ್ಯ, ಸಂಶಮನಿವಟಿ ಹಾಗೂ ಶರಬತ್-ಇ-ಉನಾಬ್ ಔಷಧಗಳನ್ನು ಸೇವಿಸುವ ವಿಧಾನಗಳ ವಿವರವಾದ ಮಾಹಿತಿಯೊಂದಿಗೆ ಆಯಾಯ ತಾಲೂಕು ಆರೋಗ್ಯಾಧಿ ಕಾರಿಗಳಿಗೆ ನೀಡಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀನಿವಾಸ ಎಂ.ಬಿ. ಅವರು ತಿಳಿಸಿದ್ದಾರೆ.