ಮಡಿಕೇರಿ, ಮೇ ೨೭: ಕೋವಿಡ್ ಆಸ್ಪತ್ರೆ ಗಂಟಲು ಸಂಗ್ರಹಣಾ/ ಫೀವರ್ ಕ್ಲೀನಿಕ್ ಮತ್ತು ಟ್ರೆöÊಯೇಜ್ ಏರಿಯಾವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಡಕ್ಕೆ ಸ್ಥಳಾಂತರ ಮಾಡಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಆಯುಷ್ ಅಧಿಕಾರಗಳ ಕಚೇರಿ ಮಹದೇವಪೇಟೆ (ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರ) ಮಡಿಕೇರಿ ಇಲ್ಲಿ ವಾರದಲ್ಲಿ ೩ ದಿನ ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಹೊರ ರೋಗಿಗಳ ಆಯುರ್ವೇದ ವಿಭಾಗ ತೆರೆಯಲಾಗಿದ್ದು, ಉಚಿತ ತಪಾಸಣೆ ನಡೆಸಿ ಆಯುರ್ವೇದ ಔಷಧಿಗಳನ್ನು ನೀಡಲಾಗುವುದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀನಿವಾಸ್ ಎಂ.ಬಿ. ತಿಳಿಸಿದ್ದಾರೆ.
ಲಸಿಕೆ ಮಾಹಿತಿ
ಕರ್ನಾಟಕ ಸರ್ಕಾರದಿಂದ ೧೮ ರಿಂದ ೪೪ ವಯೋಮಾನದಲ್ಲಿ ಕೋಮಾರ್ಬಿಡಿಟಿಯಿಂದ (ಪ್ರಾಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರು) ಬಳಲುತ್ತಿರುವ ರೋಗಿಗಳು ವೈದ್ಯರಿಂದ ದೃಢೀಕರಣ ಪತ್ರವನ್ನು ಲಸಿಕೆ ನೀಡುವ ಕೇಂದ್ರಕ್ಕೆ ಹಾಜರುಪಡಿಸಿದ್ದಲ್ಲಿ, ಕೋವಿಡ್-೧೯ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವ್ಯಾಕ್ಸಿನ್ ಎರಡನೇ ಹಂತರದ ಲಸಿಕೆ ಸರಬರಾಜಾಗಿದ್ದು, ಎರಡನೇ ಹಂತದ (ಡೋಸ್) ಪಡೆಯಲು ಬಾಕಿ ಇರುವ ಫಲಾನುಭವಿಗಳು ತಮ್ಮ ಸಮೀಪದ ಲಸಿಕಾ ಕೇಂದ್ರದಿAದ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಪ್ರಕಟಣೆಯಲ್ಲಿ ತಿಳಿಸಿದೆ.