ಮಡಿಕೇರಿ, ಮೇ ೨೭ : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿAದಲೇ ನಿರೀಕ್ಷೆಗೂ ಮೀರಿ ಹೆಚ್ಚು ಮಳೆಯಾಗಿರುವುದು ವಿಶೇಷವಾಗಿದೆ. ಜನವರಿ ತಿಂಗಳಿನಿAದ ಈ ತನಕ ಪ್ರತಿ ತಿಂಗಳಲ್ಲೂ ಜಿಲ್ಲೆಯಲ್ಲಿ ಮಳೆ ಸುರಿದಿದೆ. ಸಹಜವಾಗಿ ಬೇಸಿಗೆ ಅವಧಿಯಲ್ಲಿ ಇಷ್ಟು ಪ್ರಮಾಣದ ಮಳೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ವಾತಾವರಣದಲ್ಲಿ ಉಂಟಾದ ಅಸಹಜತೆಯ ಪರಿಣಾಮದಿಂದಾಗಿ ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಮಳೆ ಸುರಿದಿದೆ.
ಜನವರಿ ತಿಂಗಳ ಅಂತ್ಯ ಹಾಗೂ ಫೆಬ್ರವರಿಯಲ್ಲಿ ಸುರಿದ ಮಳೆಯಿಂದಾಗಿ ಈ ಬಾರಿ ಕಾಫಿ ಬೆಳೆಗಾರರಿಗೆ ಒಂದಷ್ಟು ಅನುಕೂಲಕರ ಸನ್ನಿವೇಶ ಬೆಳೆಗಾರರು ಊಹಿಸದ ರೀತಿಯಲ್ಲಿ ನಿರ್ಮಾಣವಾಗಿದೆ. ಕಾಫಿಗೆ ಹೂಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಆರಂಭಿಕ ಮಳೆ ಹಾಗೂ ನಂತರದ ಪೂರಕ ಮಳೆ ಕೂಡ ಅನುಕೂಲಕರವಾಗಿ ಲಭಿಸಿದ್ದು ಬೆಳೆಗಾರರಿಗೆ ಒಂದಷ್ಟು ಕೆಲಸ ಹಾಗೂ ಖರ್ಚು ಕಡಿಮೆಯಾಗುವಂತಾಗಿತ್ತು. ಆದರೆ ಶನಿವಾರಸಂತೆ ಸುತ್ತಮುತ್ತಲು ಸೇರಿದಂತೆ ಹಲವೆಡೆ ಅನಿರೀಕ್ಷಿತವಾಗಿ ಬಿದ್ದ ಭಾರೀ ಪ್ರಮಾಣದ ಆಲಿಕಲ್ಲು ಮಳೆ ಆ ವಿಭಾಗದ ರೈತರಿಗೆ - ಬೆಳೆಗಾರರಿಗೆ ಸಾಕಷ್ಟು ಹಾನಿಯನ್ನೂ ಉಂಟುಮಾಡಿದೆ. ಕೆಲ ಸಮಯದ ಹಿಂದೆ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ - ನೆಮ್ಮಲೆ ವಿಭಾಗದಲ್ಲಿಯೂ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸಹಿತವಾಗಿ ಮಳೆಯಾಗಿರುವುದನ್ನೂ ಸ್ಮರಿಸಬಹುದಾಗಿದೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಜನವರಿ ಆರಂಭದಿAದ ಈ ತನಕವೂ ಬಹುತೇಕ ಕಡೆಗಳಲ್ಲಿ ಪದೇ... ಪದೇ... ಮಳೆಯಾಗಿರುವುದರಿಂದಾಗಿ ಶೀತದ ವಾತಾವರಣವೇ ಕಂಡುಬAದಿದೆ. ಹಲವೆಡೆಯಲ್ಲಿ ಉಂಟಾದ ವಾಯುಭಾರ ಕುಸಿತ - ಚಂಡಮಾರುತದ ಪರಿಣಾಮದಿಂದಾಗಿ ಪ್ರಸ್ತುತವೂ ಜಿಲ್ಲೆಯಲ್ಲಿ ಮಳೆಗಾಲದ ರೀತಿಯ ಸನ್ನಿವೇಶವೇ ಮುಂದುವರಿಯುತ್ತಿದೆ. ಜನವರಿಯಿಂದ ಈತನಕ ಎಲ್ಲಾ ತಿಂಗಳಿನಲ್ಲಿಯೂ ಜಿಲ್ಲೆ ಈ ಬಾರಿ ಮಳೆಯನ್ನು ಕಂಡಿದೆ. ಕೆಲವೆಡೆಗಳಲ್ಲಿ ಪ್ರಮಾಣ ಹೆಚ್ಚಿದ್ದರೆ... ಕೆಲವೆಡೆಗಳಲ್ಲಿ ಮಾತ್ರ ಮಳೆಯ ತೀವ್ರತೆ ಒಂದಷ್ಟು ಕಡಿಮೆ ಇದೆ.
ಇದೀಗ ಎದುರಾಗಿದ್ದ ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ ಇತ್ತೀಚಿನ ಸುಮಾರು ೧೫ ದಿವಸಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಆಗಾಗ್ಗೆ ಮಳೆ ಸುರಿಯುತ್ತಿದ್ದು, ಈಗಲೂ ವಾತಾವರಣ ಇದೇ ರೀತಿ ಮುಂದುವರಿಯುತ್ತಿದೆ.
(ಮೊದಲ ಪುಟದಿಂದ) ಬೇಸಿಗೆ ಅವಧಿಯ ಸಹಜ ಅಡ್ಡಮಳೆಗಿಂತ ಈ ಬಾರಿ ಅಸಹಜತೆಯ ಸನ್ನಿವೇಶವೇ ಅಧಿಕವಾಗಿ ಪರಿಣಮಿಸಿರುವುದು ಈ ವರ್ಷದ ಬದಲಾವಣೆಯಾಗಿದೆ.
ಸರಾಸರಿ ೧೫ ರಿಂದ ೨೦ ಇಂಚು...
ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಜನವರಿಯಿಂದ ಈ ತನಕ ಸುಮಾರು ೧೫ ರಿಂದ ೨೦ ಇಂಚುಗಳಷ್ಟು ಮಳೆಯಾಗಿದೆ. ವಾಡಿಕೆಯಂತೆ ಮಳೆಗಾಲ ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಿAದ ಪ್ರಾರಂಭವಾಗುವ ಸಾಧ್ಯತೆಯಿದ್ದು, ಇನ್ನೇನು ಕೆಲದಿನಗಳು ಸರಿದಲ್ಲಿ ಈಗಿನ ವಾತಾವರಣಕ್ಕೆ ಮತ್ತೆ ಮಳೆಗಾಲವೂ ಸೇರ್ಪಡೆಯಾಗಲಿದೆ.
ಮಡಿಕೇರಿ ನಗರಕ್ಕೆ ೧೮ ಇಂಚು
ಮಡಿಕೇರಿ ನಗರಕ್ಕೆ ಜನವರಿಯಿಂದ ಈ ತನಕ ಸುಮಾರು ೧೮ ಇಂಚುಗಳಷ್ಟು ಮಳೆಬಿದ್ದಿದೆ. ಮೇ ಆರಂಭದಿAದ ಈ ತನಕ ಅಂದಾಜು ೧೦ ಇಂಚು ಮಳೆ ಜಿಲ್ಲಾ ಕೇಂದ್ರದಲ್ಲಿ ಸುರಿದಿದೆ.