ಮಡಿಕೇರಿ, ಮೇ ೨೭: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ವತೊಕ್ಲು, ಬಿಳಿಗೇರಿ ಭಾಗದ ಜನರು ಔಷಧಿ ಉತ್ಪನ್ನ ಹಾಗೂ ಅಗತ್ಯ ಸೇವೆ ಬೇಕಿದಲ್ಲಿ ತನ್ನನ್ನು ಸಂಪರ್ಕಿಸುವAತೆ ಗ್ರಾ.ಪಂ. ಉಪಾಧ್ಯಕ್ಷ ಬಿ.ಟಿ. ಕೃಷ್ಣಪ್ಪ ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ನಿಂದ ತುರ್ತು ಅವಶ್ಯಕತೆಗಳಿದ್ದಲ್ಲಿ, ಅಗತ್ಯ ವಸ್ತು ಹಾಗೂ ಔಷಧಿಯ ಉತ್ಪನ್ನಗಳು ಬೇಕಿದ್ದಲ್ಲಿ ಜನರು ನಗರಗಳಿಗೆ ಬರಲು ಸಾಧ್ಯವಾಗದಿದ್ದಲ್ಲಿ ತನ್ನನ್ನು ಸಂಪರ್ಕ ಮಾಡುವಂತೆ ಕೃಷ್ಣಪ್ಪ ಕೋರಿದ್ದಾರೆ.

ಈಗಾಗಲೇ ಗ್ರಾಮದ ಅನೇಕ ಜನರ ಸಮಸ್ಯೆಗೆ ಸ್ಪಂದಿಸಿದ್ದು, ನೆರವು ಬೇಕಿದ್ದಲ್ಲಿ ಮೊ. ೯೪೪೯೧೬೯೪೬೨ ಸಂಪರ್ಕಿಬಹುದಾಗಿದೆ ಎಂದು ತಿಳಿಸಿದ್ದಾರೆ.