ಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸದಸ್ಯ ಉಡೊತ್‌ಮೊಟ್ಟೆ ಬಿ.ಕೆ. ಗೋಪಾಲ ಪೂಜಾರಿ ಅವರು ಹೆರವನಾಡುವಿನಲ್ಲಿ ಕೋವಿಡ್-೧೯ ರಿಂದ ಬಳಲುತ್ತಿರುವವರಿಗೆ ಸ್ವತಃ ತಾವೇ ಅಗತ್ಯ ಸಾಮಗ್ರಿ ಹಾಗೂ ದಿನಸಿ ಕಿಟ್‌ಗಳನ್ನು ವಿತರಿಸಿದರು. ಕಿಟ್ ವಿತರಣೆಯ ಸಂದರ್ಭ ಪೊಲೀಸ್ ಇಲಾಖೆಯ ರವಿಕುಮಾರ್ ಮತ್ತು ಸಜನ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಜಯಸುಂಟಿಕೊಪ್ಪ : ಬೋಯಿಕೇರಿ ಹೆಲ್‌ಪಿಂಗ್ ಹ್ಯಾಂಡ್ ಸಂಘದ ವತಿಯಿಂದ ಗ್ರಾಮದಲ್ಲಿ ಕೊರೊನಾ ಸೋಂಕಿನಿAದ ಕ್ವಾರಂಟೈನ್‌ನಲ್ಲಿರುವ ಕುಟುಂಬಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಬೋಯಿಕೇರಿ ಗ್ರಾಮದಲ್ಲಿ ಕೊರೊನಾ ಸೋಂಕಿನಿAದ ೬ ಕುಟುಂಬಗಳು ಹೋಂ ಕ್ವಾರಂಟೈನ್ ನಲ್ಲಿದ್ದು ಕುಟುಂಬಗಳಿಗೆ ‘ಹೆಲ್‌ಪಿಂಗ್ ಹ್ಯಾಂಡ್’ ಅಸೋಸಿಯೇಷನ್ ವತಿಯಿಂದ ಹಣ್ಣು ಹಂಪಲು, ಮೊಟ್ಟೆಗಳನ್ನು ವಿತರಿಸಿ ಅವರಿಗೆ ಧೈರ್ಯವನ್ನು ತುಂಬಿದರು. ಈ ಸಂದರ್ಭ ಹೆಲ್‌ಪಿಂಗ್ ಹ್ಯಾಂಡ್ ಅಸೋಸಿಯೇಷನ್ ಪದಾಧಿಕಾರಿಗಳಾದ ಗಣಿ, ದಿನಿ, ಪಂಡಿತ್ ನವೀನ್, ತಿಮ್ಮಪ್ಪ, ಹಿರಿಯರಾದ ಕಿಟ್ಟಣ್ಣ, ಮೊಯ್ದು ಇದ್ದರು.ಂತಿ ಎಂ.ಎಸ್., ಧನುಕುಮಾರಿ ಹಾಗೂ ಆರೋಗ್ಯ ಸಹಾಯಕಿ ಕೃತಿಕಾರಾಣಿ ಹಾಜರಿದ್ದರು.ಚೆಯ್ಯಂಡಾಣೆ : ತಾತ್ಕಾಲಿಕ ರಜೆಯ ನಿಮಿತ್ತ ವಿದೇಶದಿಂದ ಜಿಲ್ಲೆಗೆ ಆಗಮಿಸಿದ ಅನಿವಾಸಿ ಕುಟುಂಬಗಳು ಕೊರೊನಾ ಕಾಯಿಲೆಯ ಕಾರಣದಿಂದ ದುಡಿಮೆ ಇಲ್ಲದೆ ಅತಂತ್ರರಾಗಿ ತಮ್ಮ ತಮ್ಮ ಮನೆಗಳಲ್ಲಿ ದಿನ ದೂಡುತ್ತಿದ್ದು, ಇದನ್ನರಿತು ಕ್ರಿಯಾಶೀಲರಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ - ಯುಎಇ ವತಿಯಿಂದ ಜಿಲ್ಲೆಯ ಸಂಕಷ್ಟದಲ್ಲಿರುವ ಆಯ್ದ ಅನಿವಾಸಿ ಕುಟುಂಬಗಳಿಗೆ ಕಿಟ್‌ಗಳನ್ನು ಸಂಘಟನೆಯ ವತಿಯಿಂದ ವಿತರಿಸಲಾಯಿತು. ಈ ಪ್ರಯುಕ್ತ ಯುಎಇಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಯುಎಇ ಘಟಕದ ಅಧ್ಯಕ್ಷ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಮಾತನಾಡಿ, ಸಂಘಟನೆಯ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಮಾಡುತ್ತಿರುವ ಸಮಾಜ ಮುಖಿ ಸೇವೆಗಳನ್ನು ಸವಿಸ್ತಾರವಾಗಿ ಪ್ರಸ್ತಾಪಿಸಿದರು. ಅಲ್ಲದೆ ಆದ್ಯತೆ ಮೇರೆಗೆ ಸರಕಾರಗಳು ಸಂಕಷ್ಟದಲ್ಲಿರುವ ಅನಿವಾಸಿ ಕೊಡಗಿನವರಿಗೆ ಪ್ರತ್ಯೇಕ ಪ್ಯಾಕೇಜ್ ನೀಡಲು ಕೋರಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಇದರ ಪ್ರಧಾನ ಕಾರ್ಯದರ್ಶಿ ಜೆ.ಹೆಚ್. ಇಸ್ಮಾಯಿಲ್ ಮೂರ್ನಾಡು, ಪದಾಧಿಕಾರಿಗಳಾದ ಮುಜೀಬ್ ಕಡಂಗ ಹಾಗೂ ಸಂಘಟನೆಯ ಸಲಹಾ ಸಮಿತಿ ಮತ್ತು ಕ್ಯಾಬಿನೆಟ್ ಸದಸ್ಯರು ಉಪಸ್ಥಿತರಿದ್ದರು.ಸಿದ್ದಾಪುರ, ಮೇ ೨೨: ಕೊರೊನಾದಿಂದಾಗಿ ಸಂಕಷ್ಟಕ್ಕೊಳಗಾಗಿ ಸೀಲ್‌ಡೌನ್ ವ್ಯಾಪ್ತಿಯಲ್ಲಿರುವ ಸಂತ್ರಸ್ತ ಕುಟುಂಬಗಳಿಗೆ ವಿತರಿಸಲು ಸಿದ್ದಾಪುರ ಕೊಡವ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ರೂ. ೨೫ ಸಾವಿರ ಮೌಲ್ಯದ ೩೦ ಕಿಟ್‌ಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸ ಲಾಯಿತು. ಕೊಡವ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ಕುಕ್ಕೆರ ಕೇಶು ಉತ್ತಪ್ಪ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಮಹಾಮಾರಿಯಿಂದ ಸೀಲ್‌ಡೌನ್ ವ್ಯಾಪ್ತಿಯಲ್ಲಿ ಹಲವು ಕುಟುಂಬಗಳು ಸಂಕಷ್ಟದಲ್ಲಿರುವುದನ್ನು ಅರಿತು ಕೊಡವ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಗ್ರಾ. ಪಂ. ಮೂಲಕ ವಿತರಿಸಲು ಪಂ. ಅಧ್ಯಕ್ಷರಿಗೆ ಕಿಟ್‌ಗಳನ್ನು ಹಸ್ತಾಂತರಿಸಲಾಗಿದೆ ಎಂದರು. ಆಡಳಿತ ಮಂಡಳಿಯ ಸದಸ್ಯ ದೇವಣಿರ ಸುಜಯ್ ಮಾತನಾಡಿ, ಕೊಡವ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಕಳೆದ ಹಲವು ವರ್ಷಗಳಿಂದಲೂ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಸಿ ಕೊಂಡಿದ್ದು ಕಳೆದ ಪ್ರವಾಹ ಸಂದರ್ಭದಲ್ಲೂ ಸಂಕಷ್ಟದಲ್ಲಿರು ವವರಿಗೆ ನೆರವಾಗಿದೆ ಎಂದರು. ಗ್ರಾ. ಪಂ. ಅಧ್ಯಕ್ಷೆ ರೀನಾ ತುಳಸಿ, ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಕೊಡವ ಕಲ್ಚರಲ್ ಅಸೋಸಿಯೇಶನ್‌ನ ಪ್ರಮುಖರಾದ ಪಾಲಚಂಡ ಅಚ್ಚಯ್ಯ, ಚೇಂದAಡ ಚುಮ್ಮಿ ಪೂವಯ್ಯ, ಚೇರಂಡ ಸುನೀಲ್, ಬಲ್ಲಾರಂಡ ಅಭಿನ್, ಗ್ರಾ. ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್, ಸದಸ್ಯರಾದ ಪಳನಿ, ಪೂರ್ಣಿಮಾ ಸೇರಿದಂತೆ ಮತ್ತಿತರರು ಹಾಜರಿದ್ದರು.

ವೀರಾಜಪೇಟೆ, ಮೇ ೨೩: ಬಿಟ್ಟಂಗಾಲ ಗ್ರಾ.ಪಂ.ವ್ಯಾಪ್ತಿಯ ಅಂಬಟ್ಟಿ ಅಂಗನವಾಡಿ ಕೇಂದ್ರ ಸೇರಿದಂತೆ ಇತರೆಡೆಗಳಲ್ಲಿ ಪಂ. ವತಿಯಿಂದ ಸ್ಯಾನಿಟೈಸರ್ ಮಾಡಿ, ಕೊರೊನಾ ಸೋಂಕಿತ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಯಿತು. ಬಿಟ್ಟಂಗಾಲ ಗಾ.ಪಂ.ಅಧ್ಯಕ್ಷೆ ರಮ್ಯಾ, ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರ ಇನ್ನಿತರರು ಇದ್ದರು.