ಮಡಿಕೇರಿ, ಮೇ ೨೫: ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಎಲ್ಲಾ ಪ.ಜಾತಿ ಹಾಗೂ ಪ.ಪಂಗಡದ ಕಾಲೋನಿ/ ಹಾಡಿಗಳಲ್ಲಿ ವಾಸವಾಗಿರುವ ಜನರಿಗೆ ಕೋವಿಡ್ ಲಸಿಕೆಯನ್ನು ಪಡೆಯಲು ಹೆಸರನ್ನು ನೋಂದಾಯಿಸಲು ಅನುಕೂಲವಾಗುವಂತೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಈ ಕೆಳಕಂಡ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ.

ಸಹಾಯಕ ನಿರ್ದೇಶಕರು (ಗ್ರೇ-೨) ಕಚೇರಿ, ಸೋಮವಾರಪೇಟೆ ಧರ್ಮಮ್ಮ ಕೆ.ಇ. ೯೪೪೮೭೯೨೧೭೫, ತನುಜಾ ಎಸ್. ಎಂ ೯೭೪೧೬೨೪೫೭೩. ಸಂಧ್ಯಾ ಹೆಚ್.ಬಿ. ವಾರ್ಡನ್, ಬಾಲಕಿಯರ ನಿಲಯ, ಸೋಮವಾರಪೇಟೆ -೯೪೮೨೧೯೪೧೯೫.

ಮಧು ಹೆಚ್.ಎಸ್., ವಾರ್ಡನ್, ಬಾಲಕರ ನಿಲಯ, ಕುಶಾಲನಗರ -೯೪೮೩೧೧೬೫೦೪, ಮಂಜುನಾಥ ಕೆ.ಎಸ್. ಬಾಲಕರ ನಿಲಯ, ಹೆಬ್ಬಾಲೆ-೯೭೪೧೭೪೭೬೬೧, ಚೋಂದಮ್ಮ ಹೆಚ್.ಆರ್., ವಾರ್ಡನ್, ಬಾಲಕಿಯರ ನಿಲಯ, ಕುಶಾಲನಗರ-೯೧೦೮೩೪೩೯೨೯.ಮುತ್ತಮ್ಮ ಹೆಚ್.ಎಸ್., ವಾರ್ಡನ್, ಬಾಲಕಿಯರ ನಿಲಯ, ಶನಿವಾರಸಂತೆ-೯೧೪೮೫೫೬೮೮೯, ಪುಟ್ಟಸ್ವಾಮಿ ಹೆಚ್.ಎನ್., ವಾರ್ಡನ್, ಬಾಲಕರ ನಿಲಯ, ಕೊಡ್ಲಿಪೇಟೆ-೯೬೬೩೯೮೦೫೫೪, ಭಾರತಿ ಎಸ್.ಜಿ., ವಾರ್ಡನ್, ಗಿರಿಜನ ಬಾಲಕಿಯರ ನಿಲಯ, ಕುಶಾಲನಗರ-೯೪೮೧೮೮೪೯೭೨.

ರವಿ.ಹೆಚ್.ಎಲ್, ಮುಖ್ಯಶಿಕ್ಷಕರು,ಆಶ್ರಮ ಶಾಲೆ, ಬಸವನಹಳ್ಳಿ-೮೨೭೭೨೭೭೬೫೦, ರಜನೀಕಾಂತ್ ಎನ್.ಸಿ., ಮುಖ್ಯಶಿಕ್ಷಕರು, ಆಶ್ರಮ ಶಾಲೆ, ಯಡವನಾಡು-೮೬೧೮೫೪೬೦೦೯, ಆನಂದ್ ಎಸ್.ಕೆ., ಮುಖ್ಯಶಿಕ್ಷಕರು, ಆಶ್ರಮಶಾಲೆ, ಮಾಲಂಬಿ-೬೩೬೨೫೫೫೩೨೦. ಕೋವಿಡ್ ಲಸಿಕೆ ಪಡೆದುಕೊಳ್ಳದೇ ಇರುವವರು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ ರವರೆಗೆ ಹತ್ತಿರದ ನೋಂದಣಿ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳ ಬಹುದಾಗಿದೆ. ನೋಂದಣಿ ಸಂದರ್ಭ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋನ್ ತರುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.