ಶನಿವಾರಸಂತೆ, ಮೇ ೨೪: ಸಮೀಪದ ಕೂಡ್ಲೂರು ಗ್ರಾಮದಿಂದ ಹಂಡ್ಲಿ ಗ್ರಾಮದವರೆಗೆ ೫ ಗ್ರಾಮಗಳನ್ನು ಒಳಗೊಂಡAತೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣ ವಾಗುತ್ತಿರುವ ರೂ. ೪.೯೬ ಕೋಟಿ ವೆಚ್ಚದ ೫.೯೯ ಕಿ.ಮೀ. ರಸ್ತೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಗ್ರಾಮ ಪ್ರಮುಖ ತಾಳೂರು ಗ್ರಾಮದ ಟಿ.ಎನ್. ರವಿ, ಪುನೀತ್, ಕುಮಾರ್, ಮಣಗಲಿ ಗ್ರಾಮದ ನಿತಿನ್, ಮಲ್ಲಿಕಾರ್ಜುನ್, ಮೋಹನ್ ಕುಮಾರ್, ಉಮಾಶಂಕರ್, ಹೋಮೇಶ್, ಪುನೀತ್, ಹರ್ಷ, ವಿಶ್ವಜಿತ್, ದರ್ಶನ್, ಬೆಟ್ಟದಳ್ಳಿ ಶಿವು ಹಾಗೂ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

೨೦೨೦ರ ಸೆಪ್ಟೆಂಬರ್ ೯ ರಂದು ಭಾರತ ಸರಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅನುದಾನದಲ್ಲಿ ಗುತ್ತಿಗೆದಾರ ಶಿವಲೀಲಾ ಸುರೇಶ್ ಸಜ್ಜನ್, ಇಂಜಿನಿಯರ್‌ಗಳಾದ ಪ್ರಭು ಹಾಗೂ ಪೂವಯ್ಯ ಅವರಿಂದ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಅಪ್ಪಚ್ಚು ರಂಜನ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಅಕ್ಟೋಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.

ರಸ್ತೆಯ ಎರಡೂ ಕಡೆಯಿಂದ ರಸ್ತೆಗೆ ಅಗತ್ಯವಿರುವ ೩೨ ಅಡಿ ಅಗಲೀಕರಣ ಮಾಡುತ್ತಾ ಕೆಲ ಮನೆಗಳ ಮುಂದೆ ಬೇಕಾದ ಹಾಗೇ ಜಾಗ ಬಿಟ್ಟು ಕಾಮಗಾರಿ ಮುಂದುವರೆಸಿದರು. ನಂತರ ರಸ್ತೆಗೆ ೪೦ ಹಾಗೂ ೨೦ ಎಂಎA ಕಲ್ಲುಗಳ ಮಿಶ್ರಣವನ್ನು ಹಾಕಿ ಸಮತಟ್ಟಾದ ಮೇಲ್ಪದರವನ್ನು ರೋಲಿಂಗ್ ಮಾಡಿ ಡಾಂಬರ್ ಹಾಕಿದ್ದಾರೆ. ೧೫ ದಿನಗಳ ನಂತರ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಂಚರಿಸಿದಾಗ ರಸ್ತೆಗೆ ಹಾನಿಯಾಗಿದೆ. ಪ್ರತಿದಿನ ಓಡಾಡುವ ವಾಹನಗಳಿಂದ ರಸ್ತೆಯ ಎರಡೂ ಕಡೆಯಲ್ಲೂ ಹಾಳಾಗುತ್ತಿದೆ. ೨೦೨೧ರ ಆಗಸ್ಟ್ ೧೩ಕ್ಕೆ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿಯಬೇಕಾಗಿರುವುದರಿಂದ ರಸ್ತೆಯ ಎರಡೂ ಕಡೆ ಡ್ರೆöÊನೇಜ್ ಮಾಡದೇ ರಸ್ತೆಯ ಗುಣಮಟ್ಟ ಕಳಪೆಯಾಗಿದೆ ಎಂದು ದೂರಿದ್ದಾರೆ.

ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಅಪ್ಪಚ್ಚು ರಂಜನ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಅಕ್ಟೋಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.