ಮಡಿಕೇರಿ, ಮೇ, ೨೪: ನಕಲಿ ಕೋವಿಡ್ ನೆಗೆÀಟಿವ್ ವರದಿ ಮಾಡಿಕೊಡುತ್ತಿದ್ದ ಆರೋಪದಡಿ ಸಿದ್ದಾಪುರದ ಪತ್ರಕರ್ತನೋರ್ವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಸಿದ್ದಾಪುರದ ಅಜೀಜ್ ನಕಲಿ ನೆಗೆÀಟಿವ್ ವರದಿ ಮಾಡಿಕೊಟ್ಟ ಆರೋಪದಡಿ ವಿಚಾರಣೆಗೆ ಒಳಪಟ್ಟ ಪತ್ರಕರ್ತ. ಕೇರಳಕ್ಕೆ ಪ್ರಯಾಣಿಸುವವರಿಗೆ ತನ್ನ ಫೋಟೋ ಸ್ಟುಡಿಯೋದಲ್ಲಿ ಕೋವಿಡ್ ನೆಗೆಟಿವ್ ವರದಿಯನ್ನು ತಯಾರಿಸಿ ನೀಡುತ್ತಿದ್ದ ಎನ್ನಲಾಗಿದೆ. ಕೇರಳಕ್ಕೆ ಪ್ರಯಾಣಿಸುತ್ತಿದ್ದ ನೆಲ್ಲಿಹುದಿಕೇರಿ ಮೂಲದ ಇಬ್ಬರು ಕುಟ್ಟ ಗಡಿಭಾಗದಲ್ಲಿ ಪರಿಶೀಲನೆ ವೇಳೆ ನಕಲಿ ವರದಿ ನೀಡಿರುವುದು ಬೆಳಕಿಗೆ ಬಂದಿದೆ. ಬಳಿಕ ವಿಚಾರಣೆ ನಡೆಸಿದಾಗ ಅಜೀಜ್ ನಕಲಿ ವರದಿ ತಯಾರಿಸಿ ನೀಡಿದ್ದಾನೆ ಎಂದು ಬೆಳಕಿಗೆ ಬಂದಿದೆ. ನಂತರ ಸಿದ್ದಾಪುರ ಠಾಣೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.