ಸೋಮವಾರಪೇಟೆ, ಮೇ ೨೪ : ಇಲ್ಲಿನ ಪಯೋನಿರ‍್ಸ್ ಟೆನ್ನಿಸ್ ಕ್ಲಬ್ ವತಿಯಿಂದ ಕೋವಿಡ್-೧೯ ಫ್ರಂಟ್ ಲೈನ್ ವಾರಿಯರ್ಸ್ಗಳಿಗೆ ಫೇಸ್ ಶೀಲ್ಡ್, ಫೇಸ್ ಮಾಸ್ಕ್ ಮತ್ತು ಮಧ್ಯಾಹ್ನದ ಊಟ ವಿತರಿಸಲಾಯಿತು.

ಪಟ್ಟಣ ಪಂಚಾಯತ್, ಆರಕ್ಷಕ ಠಾಣೆ, ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಊಟ ಮತ್ತು ಸಲಕರಣೆಗಳನ್ನು ವಿತರಿಸಿದರು. ನಂತರ ಕ್ಲಬ್ ಅಧ್ಯಕ್ಷರಾದ ಪ್ರವೀಣ್‌ಕುಮಾರ್ ಮಾತನಾಡಿ, ಮುಂದಿನ ನಾಲ್ಕು ಶುಕ್ರವಾರ ಕೊರೊನಾ ವಾರಿರ‍್ಸ್ಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಕ್ಲಬ್‌ನ ಹಿರಿಯ ಸದಸ್ಯರಾದ ಅನಂತರಾಮ್, ಗಣೇಶ್, ಮಂಜುನಾಥ್, ರಮೇಶ್, ರವೀಂದ್ರ, ಈರಪ್ಪರಾಜು, ವಿಕ್ರಂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸಿಪಿಐ ಮಹೇಶ್, ಸಾರ್ವಜನಿಕ ಆಸ್ಪತ್ರೆಯ ಹಿರಿಯ ವ್ಯೆದ್ಯಾಧಿಕಾರಿ ರವೀಂದ್ರ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.