ಮಡಿಕೇರಿ, ಮೇ ೨೫: ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿAದ ಮೃತಪಟ್ಟವರ ಮೊಬೈಲ್ ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ವಶಕ್ಕೆ ಪಡೆದಿರುವ ವ್ಯಕ್ತಿಯ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಜಿಲ್ಲಾ ಅಪರಾಧ ಪತ್ತೆದಳ (ಡಿಸಿಐಬಿ) ವಿಚಾರಣೆ ನಡೆಸುತ್ತಿದ್ದು, ವಶದಲ್ಲಿರುವ ಸುಮಂತ್, ಕಳ್ಳತನ ವಿಚಾರಕ್ಕೆ ಸಂಬAಧಿಸಿದAತೆ ಕೆಲವೊಂದು ವಿಷಯವನ್ನು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಮಡಿಕೇರಿಯ ಆತನ ಮನೆಗೆ ತೆರಳಿ ಸುಮಂತ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಡಿ.ಸಿ.ಐ.ಬಿ. ಯಿಂದ ವಿಚಾರಣೆ ಮುಂದುವರೆಸ ಲಾಗಿದೆ ಎಂಬ ಮಾಹಿತಿ ‘ಶಕ್ತಿ’ಗೆ ಲಭ್ಯವಾಗಿದೆ. ಸಂಪೂರ್ಣ ಪ್ರಕರಣ ವನ್ನು ಡಿ.ಸಿ.ಐ.ಬಿ. ಹಾಗೂ ಮಡಿಕೇರಿ ನಗರ ಪೊಲೀಸರಿಗೆ ವಹಿಸಲಾಗಿದ್ದು, ವಿಶೇಷ ತನಿಖಾ ತಂಡವನ್ನು ಕೂಡ ರಚನೆ ಮಾಡಲಾಗಿದೆ. ಮೊಬೈಲ್ ಕಳ್ಳತನ ಸಂಬAಧ ತಾಂತ್ರಿಕ ಪುರಾವೆ (ಡಿಜಿಟಲ್ ಎವಿಡೆನ್ಸ್)ಗಳನ್ನು ಕೂಡ ಪೊಲೀಸರು ಕಲೆ ಹಾಕುತ್ತಿದ್ದಾರೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಜಿಲ್ಲಾ ಪೊಲೀಸ್ ಇಲಾಖೆ ಪರಿಗಣಿಸಿದ್ದು, ವರಿಷ್ಠಾಧಿಕಾರಿ ಖುದ್ದು ತನಿಖೆಯ ದಿನನಿತ್ಯದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.