ಶನಿವಾರಸಂತೆ, ಮೇ ೨೪: ಸಮೀಪದ ಕೊಡ್ಲಿಪೇಟೆ ಪಟ್ಟಣದಲ್ಲಿ ಕೋವಿಡ್ ಲಾಕ್‌ಡೌನ್ ಅನ್ವಯ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಸೋಮವಾರ ಬೆಳಿಗ್ಗೆ ೬ರಿಂದ ತೆರೆದಿದ್ದ ಕೆಲವು ಅಂಗಡಿಗಳು ೧೦ ಗಂಟೆಯ ಅವಧಿ ಮೀರಿದರೂ ಮುಚ್ಚಲಿಲ್ಲ. ಗಮನಿಸಿದ ಉಪತಹಶೀಲ್ದಾರ್ ಪುರುಷೋತ್ತಮ್ ಸ್ವತಃ ತಾವೇ ಅಂಗಡಿಗಳಿಗೆ ತೆರಳಿ ಬಂದ್ ಮಾಡಿಸಿದರು.

ಅಂಗಡಿಗಳು ಅವಧಿ ಮೀರಿ ತೆರೆಯುವುದು ಪುನರಾವರ್ತನೆಯಾದಲ್ಲಿ ಕೋವಿಡ್-೧೯ ಲಾಕ್‌ಡೌನ್ ಉಲ್ಲಂಘನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.