ವೀರಾಜಪೇಟೆ, ಮೇ ೨೪: ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿರುವ ಕರ್ಫ್ಯೂ ಸಡಿಲಿಕೆ ಸಮಯದಲ್ಲಿ ಅಗತ್ಯ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುವ ವರ್ತಕರು ತಾ.೨೬ ರಿಂದ ವ್ಯವಹಾರ ಮಾಡುವ ಎಲ್ಲ ವರ್ತಕರು ಕೋವಿಡ್ ಪರೀಕ್ಷೆಯ ನೆಗೆಟಿವ್ ದೃಢೀಕರಣ ಪತ್ರವನ್ನು ಹೊಂದಿರಬೇಕು. ಇಲ್ಲದಿದ್ದರೆ ಪೊಲೀಸರು ಪ್ರಕರಣ ದಾಖಲಿಸುವುದಾಗಿ ಇಲ್ಲಿನ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ.

ಕೋವಿಡ್-೧೯ ರ ಸಂಬAಧದಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವಂತೆ ಹತ್ತು ದಿನಗಳ ಹಿಂದೆಯೇ ಅಗತ್ಯ ಅಂಗಡಿಗಳ ಸುಮಾರು ೩೪೪ ಮಂದಿ ವರ್ತಕರಿಗೆ ಪಟ್ಟಣ ಪಂಚಾಯಿತಿವತಿಯಿAದ ನೋಟೀಸ್ ಜಾರಿ ಮಾಡಿ ತಾ.೨೪ ಅಂತಿಮ ದಿನವೆಂದೂ ಘೋಷಿಸಲಾಗಿತ್ತು. ತಾ.೨೬ರಿಂದ ವರ್ತಕರ ಕೋವಿಡ್ ಪರೀಕ್ಷೆಯ ದೃಢೀಕರಣದ ಪತ್ರದ ತನಿಖೆ ನಡೆಯಲಿದೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಗೆ ಅಂಗಡಿಯಲ್ಲಿ ವ್ಯವಹಾರ ಮಾಡಲು ಅವಕಾಶವಿರುವುದಿಲ್ಲ ಎಂದು ಶ್ರೀಧರ್ ತಿಳಿಸಿದ್ದಾರೆ.