ಶ್ರೀಮಂಗಲ, ಮೇ ೨೫: ಶ್ರಿಮಂಗಲ ಮಿಲ್ ಪೈಸಾರಿಗೆ ಶ್ರೀಮಂಗಲ ಪಂಚಾಯತಿ ಅಧ್ಯಕ್ಷ ಅಜ್ಜಮಾಡ ಜಯ ಅವರು ಭೇಟಿ ನೀಡಿ ಕಡ್ಡಾಯವಾಗಿ ಎಲ್ಲಾ ಕುಟುಂಬದವರು ಕೊರೊನಾ ವ್ಯಾಕ್ಸಿನೇಷನ್ ಮಾಡಲು ಮನವಿ ಮಾಡಿದರು. ಹಾಗೆ ಇನ್ನೆರಡು ದಿನಗಳಲ್ಲಿ ಶ್ರೀಮಂಗಲ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟಿನ ವ್ಯಾಪಾರಸ್ಥರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಕೊರೊನಾ ಪರೀಕ್ಷೆ ಮಾಡಿಕೊಳ್ಳದಿದ್ದಲ್ಲಿ ಅಂತಹವರ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಕಡ್ಡಾಯ ಕೊರೊನಾ ಪರೀಕ್ಷೆ ಮಾಡಿಕೊಳ್ಳಬೇಕು. ಕಳೆದ ನಾಲ್ಕು ದಿನದಿಂದ ಶ್ರೀಮಂಗಲ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡುಬAದಿರುವುದಿಲ್ಲ ಹೀಗೆ ಜನರು ಸರಕಾರದ ನಡೆಗೆ ಸ್ಪಂದಿಸುತ್ತಿದ್ದರೆ ಶ್ರೀಮಂಗಲ ಪಂಚಾಯಿತಿಯನ್ನು ಕೊರೊನಾ ಮುಕ್ತ ಪಂಚಾಯಿತಿ ಮಾಡಬಹುದು ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ.