*ಗೋಣಿಕೊಪ್ಪಲು, ಮೇ ೨೫: ಆತಂಕಕಾರಿ ಕೊರೊನಾದ ವಿರುದ್ಧ ಜನಜಾಗೃತಿ ಮೂಡಿಸುವ ಮೂಲಕ ಜನರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಸಮರ್ಪಕ ಸೇವೆ ನೀಡುವಲ್ಲಿ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಜ್ಜೆ ಇಟ್ಟಿದೆ.
ತಿತಿಮತಿ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ೧೫ ಸಾವಿರ ಜನರಿಗೆ ಉತ್ತಮ ಸೇವೆ ನೀಡುವಲ್ಲಿ ಇಲ್ಲಿನ ವೈದ್ಯರು ಹಾಗೂ ಶುಶ್ರೂಷಕಿಯರ ಶ್ರಮ ಶ್ಲಾಘನೀಯವಾಗಿದೆ. ಈಗಾಗಲೇ ೨೨೬೩ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಿ ಕೊರೊನಾ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ತಾವೇ ಖುದ್ದು ಮುಂದೆ ನಿಂತು ಹಾಡಿ ಜನರ ಮನವೊಲಿಸುವ ಮೂಲಕ ವ್ಯಾಕ್ಸಿನ್ ಪಡೆದುಕೊಳ್ಳಲು ವಿಶೇಷವಾಗಿ ಇಲ್ಲಿನ ಆರೋಗ್ಯ ನೌಕರರು ಕಾಳಜಿ ವಹಿಸಿರುವುದರ ಜತೆಗೆ ಪ್ರತಿಯೊಬ್ಬರ ಆರೋಗ್ಯದ ದೃಷ್ಠಿಯಿಂದ ಶಕ್ತಿ ಮೀರಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಈ ಸೇವೆಗೆ ಜನವಲಯದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರವು ವಿವೇಕಾನಂದ ಫೌಂಡೇಷನ್‌ನ ನಿರ್ವಹಣೆಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.
ಚರ್ಮ ಹಾಗೂ ಸ್ತಿçÃರೋಗ ತಜ್ಞರಾದ ಡಾ. ಹೊಸಮನಿ ಅವರೊಂದಿಗೆ ಶುಶ್ರೂಷಕಿ ಸುಮಿತ್ರಾ ಅವರ ಸೇವೆಯು ಅಮೂಲ್ಯವಾಗಿದ್ದು, ಇವರ ಜತೆಗೆ ಆರು ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಯರು, ಚಾಲಕರು, ಲ್ಯಾಬ್ ಟೆಕ್ನೀಷಿಯನ್, ಫಾರ್ಮಸಿಸ್ಟ್, ಡಿ ಗ್ರೂಪ್ ನೌಕರರ ಸೇವೆ ಈ ಭಾಗದ ಜನತೆಗೆ ಸಮರ್ಪಕವಾಗಿ ಸಿಗುತ್ತಿದೆ.
ಪ್ರತಿನಿತ್ಯ ಕನಿಷ್ಟವೆಂದರೂ ನೂರರಿಂದ ನೂರೈವತ್ತು ಜನ ಆರೋಗ್ಯ ಚೇತರಿಕೆಗಾಗಿ ಇಲ್ಲಿನ ಸೇವೆಯನ್ನು ಪರಿಗಣಿಸುತ್ತಾರೆ.
ಆರೋಗ್ಯ ಕೇಂದ್ರದ ವ್ಯಾಪ್ತಿಗೆ ದೃಷ್ಠಿಯಿಂದ ಶಕ್ತಿ ಮೀರಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಈ ಸೇವೆಗೆ ಜನವಲಯದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರವು ವಿವೇಕಾನಂದ ಫೌಂಡೇಷನ್‌ನ ನಿರ್ವಹಣೆಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.
ಚರ್ಮ ಹಾಗೂ ಸ್ತಿçÃರೋಗ ತಜ್ಞರಾದ ಡಾ. ಹೊಸಮನಿ ಅವರೊಂದಿಗೆ ಶುಶ್ರೂಷಕಿ ಸುಮಿತ್ರಾ ಅವರ ಸೇವೆಯು ಅಮೂಲ್ಯವಾಗಿದ್ದು, ಇವರ ಜತೆಗೆ ಆರು ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಯರು, ಚಾಲಕರು, ಲ್ಯಾಬ್ ಟೆಕ್ನೀಷಿಯನ್, ಫಾರ್ಮಸಿಸ್ಟ್, ಡಿ ಗ್ರೂಪ್ ನೌಕರರ ಸೇವೆ ಈ ಭಾಗದ ಜನತೆಗೆ ಸಮರ್ಪಕವಾಗಿ ಸಿಗುತ್ತಿದೆ.
ಪ್ರತಿನಿತ್ಯ ಕನಿಷ್ಟವೆಂದರೂ ನೂರರಿಂದ ನೂರೈವತ್ತು ಜನ ಆರೋಗ್ಯ ಚೇತರಿಕೆಗಾಗಿ ಇಲ್ಲಿನ ಸೇವೆಯನ್ನು ಪರಿಗಣಿಸುತ್ತಾರೆ.
ಆರೋಗ್ಯ ಕೇಂದ್ರದ ವ್ಯಾಪ್ತಿಗೆ ವೈಖರಿ ಕೊರೊನಾ ಕಾಲದಲ್ಲಿ ಅವಶ್ಯಕತೆಯನ್ನು ಒದಗಿಸಿದೆ. ವ್ಯಾಕ್ಸಿನೇಷನ್ ಕಾರ್ಯದಲ್ಲಿ ಆರೋಗ್ಯ ಕೇಂದ್ರ ತಂಡವನ್ನು ರಚಿಸಿ ನಿಭಾಯಿಸುತ್ತಿದೆ.
ಆಡಳಿತಾಧಿಕಾರಿ ಅರ್ಜುನ್ ಅವರ ನಿರ್ವಹಣೆ ಯೊಂದಿಗೆ ದಾದಿ ಸುಮಿತ್ರಾ, ಮಹಾದೇವಮ್ಮ, ಸಿಬ್ಬಂದಿಗಳಾದ ಜಯರಾಜ್ ಹಾಗೂ ಕಿರಣ ಅವರು ಕ್ರಾರ್ಯ ಪ್ರವೃತ್ತರಾಗಿದ್ದಾರೆ.
- ಎನ್.ಎನ್. ದಿನೇಶ್