ಕಣಿವೆ, ಮೇ ೨೫: ಸರ್ಕಾರದ ಸಕಾಲಿಕವಾದ ತಾಂತ್ರಿಕ ಮಾಹಿತಿ ಯೊಂದಿಗೆ ಆರ್ಥಿಕ ಸವಲತ್ತು ದೊರಕುವ ಆಧುನಿಕ ರೇಷ್ಮೆ ಕೃಷಿ ಪದ್ಧತಿ ರೈತರಿಗೆ ಹೆಚ್ಚು ವರದಾನ ವಾಗಿದ್ದು, ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳ ಆದಾಯವನ್ನು ತಂದು ಕೊಡುವ ಜೊತೆಗೆ ಈ ಕೃಷಿ ಕೃಷಿಕರಿಗೆ ಅಭಯವನ್ನು ನೀಡುತ್ತಿದೆ.

ಒಂದು ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಕೈಗೊಂಡರೆ ಒಂದು ವರ್ಷಕ್ಕೆ ಕನಿಷ್ಟ ೪ ಬೆಳೆ ತೆಗೆಯಬಹುದು. ಕೇಂದ್ರ ಸರ್ಕಾರದ ಕೊಡು - ಕೊಳ್ಳುವಿಕೆಯ ಒಪ್ಪಂದ ದಂತೆ ರೇಷ್ಮೆ ಮೊಟ್ಟೆಯನ್ನು ಪಡೆದ ಕೇಂದ್ರಕ್ಕೆ ಮರಳಿ ಗುಣಮಟ್ಟದ ರೇಷ್ಮೆ ಗೂಡನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಕೃಷಿಕರಾದ ಚಿಕ್ಕಹೊಸೂರಿನ ನಟರಾಜು ಮತ್ತು ಸೋಮಶೇಖರ್ ಎಂಬವರು ಬೇರೆಲ್ಲಾ ಬೆಳೆಗಳಿಗೆ ಹೋಲಿಸಿದಲ್ಲಿ ರೇಷ್ಮೆ ಬೆಳೆ ಅತ್ಯಲ್ಪ ಅವಧಿಯಲ್ಲಿ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದೆ ಎನ್ನುತ್ತಾರೆ.

ಮನೆಯಲ್ಲಿ ದುಡಿಯುವವರಿದ್ದರೆ ಇನ್ನೂ ಹೆಚ್ಚಿನ ಆದಾಯಗಳಿಸ ಬಹುದು. ಆದರೆ ಕೂಲಿ ಕಾರ್ಮಿಕರನ್ನೇ ಆಶ್ರಯಿಸಿದರೆ ಒಂದು ಬೆಳೆ ತೆಗೆಯಲು ಕನಿಷ್ಟ ೩೦ ರಿಂದ ೪೦ ಸಾವಿರ ಖರ್ಚು ಬರುತ್ತದೆ. ಕನಿಷ್ಟ ಕಣಿವೆ, ಮೇ ೨೫: ಸರ್ಕಾರದ ಸಕಾಲಿಕವಾದ ತಾಂತ್ರಿಕ ಮಾಹಿತಿ ಯೊಂದಿಗೆ ಆರ್ಥಿಕ ಸವಲತ್ತು ದೊರಕುವ ಆಧುನಿಕ ರೇಷ್ಮೆ ಕೃಷಿ ಪದ್ಧತಿ ರೈತರಿಗೆ ಹೆಚ್ಚು ವರದಾನ ವಾಗಿದ್ದು, ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳ ಆದಾಯವನ್ನು ತಂದು ಕೊಡುವ ಜೊತೆಗೆ ಈ ಕೃಷಿ ಕೃಷಿಕರಿಗೆ ಅಭಯವನ್ನು ನೀಡುತ್ತಿದೆ.

ಒಂದು ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಕೈಗೊಂಡರೆ ಒಂದು ವರ್ಷಕ್ಕೆ ಕನಿಷ್ಟ ೪ ಬೆಳೆ ತೆಗೆಯಬಹುದು. ಕೇಂದ್ರ ಸರ್ಕಾರದ ಕೊಡು - ಕೊಳ್ಳುವಿಕೆಯ ಒಪ್ಪಂದ ದಂತೆ ರೇಷ್ಮೆ ಮೊಟ್ಟೆಯನ್ನು ಪಡೆದ ಕೇಂದ್ರಕ್ಕೆ ಮರಳಿ ಗುಣಮಟ್ಟದ ರೇಷ್ಮೆ ಗೂಡನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಕೃಷಿಕರಾದ ಚಿಕ್ಕಹೊಸೂರಿನ ನಟರಾಜು ಮತ್ತು ಸೋಮಶೇಖರ್ ಎಂಬವರು ಬೇರೆಲ್ಲಾ ಬೆಳೆಗಳಿಗೆ ಹೋಲಿಸಿದಲ್ಲಿ ರೇಷ್ಮೆ ಬೆಳೆ ಅತ್ಯಲ್ಪ ಅವಧಿಯಲ್ಲಿ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದೆ ಎನ್ನುತ್ತಾರೆ.

ಮನೆಯಲ್ಲಿ ದುಡಿಯುವವರಿದ್ದರೆ ಇನ್ನೂ ಹೆಚ್ಚಿನ ಆದಾಯಗಳಿಸ ಬಹುದು. ಆದರೆ ಕೂಲಿ ಕಾರ್ಮಿಕರನ್ನೇ ಆಶ್ರಯಿಸಿದರೆ ಒಂದು ಬೆಳೆ ತೆಗೆಯಲು ಕನಿಷ್ಟ ೩೦ ರಿಂದ ೪೦ ಸಾವಿರ ಖರ್ಚು ಬರುತ್ತದೆ. ಕನಿಷ್ಟ ನಾಟಿ ಮಾಡುವಾಗ ಎಕರೆಗೆ ತಲಾ ೫ ಸಾವಿರ ಸಹಾಯಧನ, ಹೀಗೆ ಏನೆಲ್ಲಾ ಬೇಕೋ ಅದೆಲ್ಲವನ್ನು ಒದಗಿಸಲಾಗುತ್ತಿತ್ತು. ಆದರೆ ಕಳೆದ ಐದಾರು ವರ್ಷಗಳ ಈಚೆಗೆ ಈ ಸೌಲಭ್ಯಗಳಲ್ಲಿ ಒಂದಷ್ಟು ಹಿನ್ನಡೆಯಾಗಿದೆ. ಅದಾಗ್ಯೂ ಮನೆಗಳು ವಿಶಾಲ ಇರುವ ಕೃಷಿಕರು ಕಡಿಮೆ ಖರ್ಚಿನಲ್ಲಿ ಈ ಲಾಭದಾಯಕ ಬೆಳೆ ಬೆಳೆದು ಹೆಚ್ಚು ಆದಾಯಗಳಿಸ ಬಹುದಾಗಿದೆ ಎನ್ನುತ್ತಾರೆ ಕೃಷಿಕ ಸೋಮಶೇಖರ್.

ಶುಚಿತ್ವ ಮುಖ್ಯ: ವಾಣಿಜ್ಯ ಬೆಳೆ ಹಾಗೂ ಹಣದ ಬೆಳೆ ರೇಷ್ಮೆ ಬೆಳೆಯಲು ಮುಖ್ಯವಾಗಿ ಹುಳು ಸಾಕಾಣಿಕೆಯ ಜಾಗದಲ್ಲಿ ಶುಚಿತ್ವವಿ ರಬೇಕು. ಯಾವುದೇ ಸಾಂಕ್ರಾಮಿಕಗಳು ಹರಡದಂತೆ ತುಂಬಾ ಮಡಿವಂತಿಕೆ ಯಿಂದ ಎಚ್ಚರವಹಿಸಬೇಕು. ರೇಷ್ಮೆ ಬೆಳೆಗೆ ಯಾವುದೇ ರೋಗ ಬಾಧೆ ಹೊರಗಿಂದ ಬಾಧಿಸುವುದಿಲ್ಲ. ಅದರ ನಿರ್ವಹಣೆಯಲ್ಲಿ ವ್ಯತ್ಯಾಸ ಬಂದರೆ, ಅಶುಚಿತ್ವ ಬಾಧಿಸಿದರೆ ಮಾತ್ರ ಈ ಬೆಳೆ ವಿಫಲವಾಗುತ್ತದೆ. ಆದ್ದರಿಂದ ಹೊಸ ತಾಂತ್ರಿಕತೆ ವಿಧಾನ ಅಳವಡಿಸಿ ಕೊಂಡು ಉತ್ತಮವಾದ ಗುಣಮಟ್ಟದ ಬೆಳೆಯನ್ನು ಬೆಳೆಯಬಹುದು ಎನ್ನುತ್ತಾರೆ ಸೋಮಶೇಖರ್.

ರೇಷ್ಮೆಯ ಕಡ್ಡಿಯನ್ನು ನಾಟಿ ಮಾಡುವಾಗಲೂ ಕೂಡ ಗಿಡದಿಂದ ಗಿಡಕ್ಕೆ ೮ ಅಡಿ ಅಂತರದಲ್ಲಿ ಸಾಲು ಮಾಡಿಕೊಂಡು ನೆಟ್ಟರೆ ಅದರ ಉಳುಮೆ, ಕಳೆ ತೆಗೆವುದು ಸೇರಿದಂತೆ ಒಟ್ಟಾರೆ ನಿರ್ವಹಣೆಯನ್ನು ಟ್ರಾö್ಯಕ್ಟರ್ ಮೂಲಕವೇ ಮಾಡಬಹುದು ಎಂದು ಸೋಮಶೇಖರ್ ಹೇಳುತ್ತಾರೆ.

ಒಟ್ಟಾರೆ ಕೃಷಿಕರು ಮಾಡಿದ್ದನ್ನೆ ಮಾಡದೇ ಅಂದರೆ, ಯಾರೋ ಒಬ್ಬ ಕೃಷಿಕ ಬೆಳೆದು ಯಾವಾಗಲೋ ಕೈ ತುಂಬಾ ಹಣ ಗಳಿಸಿದ ಎಂಬ ಕಾರಣಕ್ಕೆ ಇಡೀ ಊರಿನ ಮಂದಿ ಏಕ ಪ್ರಕಾರದ ಬೆಳೆ ಮಾಡೋಕೆ ಹೊರಟರೆ ಬೆಲೆ ಕ್ಷೀಣಿಸದೇ ಇನ್ನೇನಾ ದೀತು. ಇನ್ನಾದರೂ ಮಾಯಾ ಬೆಳೆ ಶುಂಠಿ ಕೃಷಿಕರು, ಬೆಲೆ ಕುಸಿತಕ್ಕೆ ತುತ್ತಾಗದೇ ಪರ್ಯಾಯ ಬೆಳೆ ಯಾದ ಇಂತಹ ರೇಷ್ಮೆ ಬೆಳೆ ಪದ್ಧತಿಗೆ ಮುಂದಾಗಬೇಕೆAಬುದೇ ಪ್ರಮುಖ ಆಶಯ.

- ಕೆ.ಎಸ್. ಮೂರ್ತಿ