.jpg)
ಸೋಮವಾರಪೇಟೆ, ಮೇ ೨೪: ಕೋವಿಡ್ ವೈರಸ್ಗೆ ತುತ್ತಾಗಿ ಆಸ್ಪತ್ರೆಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ವೃದ್ಧೆಯನ್ನು ದಾರಿ ಮಧ್ಯೆಯೇ ಇಳಿಸಿ ಆಂಬ್ಯುಲೆನ್ಸ್ ಚಾಲಕನೋರ್ವ ಅಮಾನವೀಯ ವರ್ತನೆ ತೋರಿದ ಘಟನೆ ನಿನ್ನೆ ಪಟ್ಟಣ ಸಮೀಪದ ಐಗೂರುವಿನ ಕಬ್ಬಿಣಸೇತುವೆ ಜಂಕ್ಷನ್ನಲ್ಲಿ ನಡೆದಿದೆ.
ತಾಲೂಕಿನ ಕಿರಗಂದೂರು ಸೋಮವಾರಪೇಟೆ, ಮೇ ೨೪: ಕೋವಿಡ್ ವೈರಸ್ಗೆ ತುತ್ತಾಗಿ ಆಸ್ಪತ್ರೆಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ವೃದ್ಧೆಯನ್ನು ದಾರಿ ಮಧ್ಯೆಯೇ ಇಳಿಸಿ ಆಂಬ್ಯುಲೆನ್ಸ್ ಚಾಲಕನೋರ್ವ ಅಮಾನವೀಯ ವರ್ತನೆ ತೋರಿದ ಘಟನೆ ನಿನ್ನೆ ಪಟ್ಟಣ ಸಮೀಪದ ಐಗೂರುವಿನ ಕಬ್ಬಿಣಸೇತುವೆ ಜಂಕ್ಷನ್ನಲ್ಲಿ ನಡೆದಿದೆ.
ತಾಲೂಕಿನ ಕಿರಗಂದೂರು ಗ್ರಾಮದ ನಿವಾಸಿ ಪೊನ್ನಮ್ಮ (೬೦) ಅವರಿಗೆ ಕಳೆದ ೧೦ ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿನ್ನೆ ದಿನ ಗುಣ ಮುಖರಾಗಿದ್ದಾರೆ.
ಇವರ ಪತಿ ಹಾಗೂ ಪುತ್ರಿಗೂ ಕೊರೊನಾ ಸೋಂಕು ತಗುಲಿದ್ದು, ಗ್ರಾಮದ ನಿವಾಸಿ ಪೊನ್ನಮ್ಮ (೬೦) ಅವರಿಗೆ ಕಳೆದ ೧೦ ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿನ್ನೆ ದಿನ ಗುಣ ಮುಖರಾಗಿದ್ದಾರೆ.
ಇವರ ಪತಿ ಹಾಗೂ ಪುತ್ರಿಗೂ ಕೊರೊನಾ ಸೋಂಕು ತಗುಲಿದ್ದು, ಸಂಜೆ ೫.೩೦ರ ವೇಳೆಗೆ ಮಡಿಕೇರಿಯಿಂದ ಪೊನ್ನಮ್ಮ ಅವರನ್ನು ಕರೆತಂದ ಆಂಬ್ಯುಲೆನ್ಸ್ನ ಚಾಲಕ ಕಿರಗಂದೂರು ಗ್ರಾಮದ ಮನೆಗೆ ಕರೆದೊಯ್ಯದೆ ಐಗೂರುವಿನ ಕಬ್ಬಿಣ ಸೇತುವೆ ಜಂಕ್ಷನ್ ಬಳಿಯ ಲ್ಲಿಯೇ ಬಿಟ್ಟು ಹೋಗಿದ್ದಾರೆ.
ಈ ಬಗ್ಗೆ ವೃದ್ಧೆಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಗೂರಿನಿಂದ ಕಿರಗಂದೂರಿಗೆ ೨ ಕಿಲೋಮೀಟರ್ ಇದೆ. ಹೀಗಾಗಿ ತನ್ನ ಮನೆಗೆ ಹೋಗಲು
(ಮೊದಲ ಪುಟದಿಂದ) ವೃದ್ಧೆ ಪರದಾಟ ಪಟ್ಟಿದ್ದಾರೆ. ಅವರು ಗಾಬರಿಯಿಂದ ತಮ್ಮ ಮನೆಗೆ ನಡೆದು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಪರಿಚಯದ ಓರ್ವ ಆಟೋ ಚಾಲಕ ಅವರನ್ನು ಹತ್ತಿಸಿಕೊಂಡಿದ್ದಾರೆ. ಅಷ್ಟರಲ್ಲಾಗಲೇ ಪೊನ್ನಮ್ಮ ಅವರ ಮಗಳು ಶಾಂತಿಗೆ ಆಶಾ ಕಾರ್ಯಕರ್ತೆಯೊಬ್ಬರ ಮೂಲಕ ವಿಷಯ ತಿಳಿದು ತಮ್ಮ ಸಂಬAಧಿಕರೊಬ್ಬರ ವಾಹನದಲ್ಲಿ ಧಾವಿಸಿದ್ದಾರೆ. ಬಳಿಕ ದಾರಿ ಮಧ್ಯೆ ಆಟೋ ನಿಲ್ಲಿಸಿ ತಾನು ಬಂದ ವಾಹನದಲ್ಲಿ ತನ್ನ ತಾಯಿಯನ್ನು ಮನೆÀಗೆ ಕರೆದೊಯ್ದಿದ್ದಾರೆ. ಈ ಕುರಿತಾಗಿ ಶಾಂತಿ “ಶಕ್ತಿ”ಯೊಂದಿಗೆ ಹಂಚಿಕೊAಡ ಸಂವೇದನಾತ್ಮಕ ಅಭಿಪ್ರಾಯ ಹೀಗಿದೆ: ನನ್ನ ಅಮ್ಮ ಪೊನ್ನಮ್ಮ ಅವರಿಗೆ ಕೊರೊನಾ ಪಾಸಿಟಿವ್ ಬಂದ ಬಳಿಕ ಕಿರಗಂದೂರುವಿನ ಮನೆಯಲ್ಲಿಯೇ ಕ್ವ್ವಾರಂಟೈನ್ನಲ್ಲಿದ್ದರು. ಆದರೆ, ಕಳೆದ ತಾ. ೧೫ ರಂದು ಅವರ ಆರೋಗ್ಯದಲ್ಲಿ ಏರು ಪೇರಾಯಿತು. ತಕ್ಷ್ಷಣವೇ ೧೦೮ ಸಂಖ್ಯೆಗೆ ಆಂಬ್ಯುಲೆನ್ಸ್ಗೆ ಕರೆ ಮಾಡಿದಾಗ ಸಕಾಲಕ್ಕೆ ಆಂಬ್ಯುಲೆನ್ಸ್ ಬಂದಿದ್ದು ಅವರನ್ನು ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸೇರಿಸಲಾಯಿತು. ತುರ್ತು ಚಿಕಿತ್ಸೆಗೋಸ್ಕರ ಅವರನ್ನು ಆ ದಿನ ರಾತ್ರಿ ಐಸಿಯುನಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು. ಆ ರಾತ್ರಿ ನಾನು ಅಲ್ಲಿಯೇ ಇದ್ದೆ. ಮರುದಿನ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಯಿತು. ಮತ್ತ್ತೊಬ್ಬರು ಅಲ್ಲಿ ಇರಲು ಅವಕಾಶÀ ಇಲ್ಲದುದರಿಂದ ನಾನು ಕಿರಗಂದೂರುವಿನ ಮನೆಗೆ ವಾಪಸಾದೆ. ಅದಕ್ಕೂ ಮುನ್ನ ಆಸ್ಪತ್ರೆಯವರು ನನ್ನ ದೂರವಾಣಿ ಸಂಖ್ಯೆಯನ್ನು ನಮೂದಿಸಿಕೊಂಡಿದ್ದರು. ಅಲ್ಲದೆ, ಆಸ್ಪತ್ರೆ ಸಹಾಯವಾಣಿ ಸಂಖ್ಯೆಯನ್ನೂ ನನಗೆ ನೀಡಿದರು. ಅದರಂತೆ ದಿನವೂ ನಾನು ಸಹಾಯ ವಾಣಿ ಮೂಲಕ ಅಮ್ಮನ ಆರೋಗ್ಯದ ಬಗ್ಗೆ ತಿಳಿದುಕೊಳ್ಳುತ್ತ್ತಿದ್ದೆ. ಆದರೆÀ, ಭಾನುವಾರ(೨೩) ಸಂಜೆ ಆಸ್ಪತ್ರೆೆÉಯಿಂದ ನನಗೆ ಯಾವದೇ ಮಾಹಿತಿ ನೀಡದೆ ಏಕಾಏಕಿ ಆಂಬ್ಯುಲೆನ್ಸ್ನಲ್ಲಿ ನನ್ನ ತಾಯಿ ಪೊನ್ನಮ್ಮ ಅವರನ್ನು ಕರೆತಂದು ದಾರಿಮಧ್ಯೆ ಬಿಟ್ಟು ಹೋಗಿದ್ದಾರೆÉ. ಈ ಬಗ್ಗೆ ನಾನು ದೂರವಾಣಿ ಮೂಲಕ ಆಸ್ಪತ್ರೆಗೆ ಕರೆ ಮಾಡಿ ಪ್ರಶ್ನಿಸಿದಾಗ “ಶಿಫ್ಟ್ ವ್ಯವಸ್ಥೆಯಲ್ಲಿ ಸಿಬ್ಬಂದಿ ಬದಲಾಗುತ್ತಿರುತ್ತಾರೆ. ಹಾಗಾಗಿ ಯಾರು ಕಳುಹಿಸಿದ್ದಾರೆ, ನಿಮ್ಮ ಫೋನ್ ಸಂಖ್ಯೆ ಇತ್ಯಾದಿ ಬಗ್ಗೆ ನಮಗೆ ಮಾಹಿತಿಯಿರುವದಿಲ್ಲ” ಎನ್ನುವ ಉತ್ತರ ಬಂದಿದೆ ಎಂದು ಶಾಂತಿ ನೊಂದು ನುಡಿದರು.
ಈ ಬೆಳವಣಿಗೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಅವರ ಅಭಿಪ್ರಾಯ ಬಯಸಿದಾಗ ಅವರಿಂದ ದೊರೆತ ಆಶ್ವಾಸನೆ ಹೀಗಿದೆ” ಆಂಬ್ಯುಲೆನ್ಸ್ ಚಾಲಕನಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ವ್ಯವಸ್ಥೆಗೊಳಿಸಲಾಗಿದೆ. ಆಂಬ್ಯುಲೆನ್ಸ್ ಚಾಲಕರು ಮುಂದಿನ ದಿನಗಳಲ್ಲಿ ಡಿಸ್ಚಾರ್ಜ್ ಆಗುವ ಮಂದಿಯನ್ನು ಅವರ ಊರಿಗೆ ಬಿಟ್ಟ ಬಳಿಕ ಒಂದು ಪುಸ್ತಕದಲ್ಲಿ ಕಡ್ಡಾಯವಾಗಿ ಅವರ ರುಜು ಪಡೆÀಯಬೇಕು. ಅಲ್ಲದೆ, ಆಸ್ಪತ್ರೆಯವರು ಕೂಡ ಡಿಸ್ಚಾರ್ಜ್ ಆಗುತ್ತಿರುವವರ ಕುಟುಂಬ ಸದಸ್ಯರಿಗೆ ಮೊಬೈಲ್ ಮೂಲಕ ಪೂರ್ವ ಮಾಹಿತಿ ನೀಡಬೇಕು” ಎಂದು ಸೂಚಿಸಿರುವದಾಗಿ ಅವರು ಖಚಿತಪಡಿಸಿದರು.
.