*ಸಿದ್ದಾಪುರ, ಮೇ ೨೫: ಇಲ್ಲಿನ ಕೇಸರಿ ಯೂತ್ ಸಂಘಟನೆಯ ವತಿಯಿಂದ ಸಿದ್ದಾಪುರ ಮೈಸೂರು ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಶ್ರಮದಾನ ನಡೆಸಲಾಯಿತು.
ಕುರುಚಲು ಕಾಡುಗಳಿಂದ ಆವರಿಸಿ ಮೃತದೇಹದ ಅಂತಿಮ ಸಂಸ್ಕಾರ ನಡೆಸಲು ಸ್ಥಳೀಯ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೇಸರಿ ಯೂತ್ ಮೂಮೆಂಟ್ ಸಂಘಟನೆಯ ಯುವಕರು ಹಾಗೂ ಮಹಿಳೆಯರು ಹಿಂದೂ ರುದ್ರ ಭೂಮಿಯಲ್ಲಿ ಬೆಳದಿದ್ದ ಕುರುಚಲು ಕಾಡು ಕಡಿದು, ತ್ಯಾಜ್ಯವನ್ನು ವಿಲೇವಾರಿ ಮಾಡಿ ಶ್ರಮದಾನ ನಡೆಸಿದರು.