ಮುಳ್ಳೂರು, ಮೇ ೨೫: ಬಡವರ ಸಹಾಯವಾಣಿ ತಂಡ ಮತ್ತು ಉದ್ಯಮಿ ಚಾಮೇರ ಪವನ್ ದೇವಯ್ಯ ಅವರ ವತಿಯಿಂದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆ ಸಿಬ್ಬಂದಿ, ರೋಗಿಗಳು, ಕೋವಿಡ್ ಲಸಿಕೆ ಹಾಕಿಸಿ ಕೊಳ್ಳಲು ಬಂದವರಿಗೆ, ಪೆಟ್ರೋಲ್ ಬಂಕ್ ಸಿಬ್ಬಂದಿ, ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ, ಅನಾಥರಿಗೆ ಮತ್ತು ಸಾರ್ವಜನಿಕರಿಗೆ ಭಾನುವಾರ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಬಡವರ ಸಹಾಯವಾಣಿ ತಂಡದಿAದ ಸುಮಾರು ೬೦ ಮಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭ ಬಡವರ ಸಹಾಯವಾಣಿ ತಂಡದ ಸದಸ್ಯ ಕರವೇ ಪ್ರಾನ್ಸಿಸ್ ಡಿಸೋಜ, ಕಿಶನ್ ರೈ, ಯತೀಶ್, ಅರ್ಚಕ ವಿಶ್ವರೂಪಚಾರ್ಯ, ಪ್ರಮುಖರಾದ ಗುರುಪ್ರಸಾದ್, ಜಯಪ್ಪ, ಮಹೇಶ್ ಗೌಡಳ್ಳಿ, ದಿನೇಶ್, ಧರ್ಮಾಚಾರ್ಯ ಮುಂತಾದವರಿದ್ದರು.