ಮಡಿಕೇರಿ, ಮೇ ೨೫: ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಆರೋಗ್ಯ ಸೇವೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಒಂದು ತಿಂಗಳ ಅವಧಿಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ ಕೇಂದ್ರ/ ಸಾರ್ವಜನಿಕ ಆಸ್ಪತ್ರೆ/ ಜಿಲ್ಲಾ ಆಸ್ಪತ್ರೆಗಳಲ್ಲಿ ತರಬೇತಿ ಆಯೋಜಿಸಲಾಗುತ್ತದೆ.
ಆದ್ದರಿಂದ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ತಾ. ೨೬ರ ಅವಧಿಯೊಳಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯವರ ಕಚೇರಿಯಲ್ಲಿ ದೂರವಾಣಿ ಮೂಲಕ (೦೮೨೭೨-೨೨೫೮೫೧) ಹಾಗೂ hಣಣಠಿs://ಜಿoಡಿms.gಟe/ಜಠಿPಠಿಡಿqo೬ಏಒಖಆಓರಿಜe೭ ಗೂಗಲ್ ಲಿಂಕ್ ಮೂಲಕ ಹಾಗೂ ಕ್ಯೂಆರ್ ಕೋಡ್ ಮೂಲಕವು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಿ.ಎಂ.ಉಮಾ. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಮೊ.ಸಂ:೭೨೫೯೧೩೮೫೪೬, ಡಾ.ರೂಪ ಎಚ್.ಜೆ. ಮೊ.ಸಂ. ೮೧೪೭೫೭೩೨೮೧, ಹಾಗೂ ವೀರೇಶ್ ಜೆ. ಅಲ್ಲದ್ ಮೊ.ಸಂ. ೭೨೦೪೮೫೩೮೭೬, ಇ-ಮೇಲ್ ವಿಳಾಸ: ಜsಜoಞoಜಚಿgu೨೦೨೦@gmಚಿiಟ.ಛಿom ಅನ್ನು ಸಂಪರ್ಕಿಸಬಹುದಾಗಿದೆ.