ಪೊನ್ನಂಪೇಟೆ, ಮೇ ೨೪: ಜಿಲ್ಲಾಡಳಿತ ನಿಗದಿ ಪಡಿಸಿರುವ ಬೆಲೆಗಿಂತ ಅಧಿಕ ಬೆಲೆಗೆ ಪೊನ್ನಂಪೇಟೆಯ ವರ್ತಕರು ತರಕಾರಿ ಮಾರಾಟ ಮಾಡುತ್ತಿದ್ದದ್ದು ಕಂಡುಬAತು. ಈ ಬಗ್ಗೆ ವಿಚಾರಿಸಿ ದಾಗ ಜಿಲ್ಲಾಡಳಿತ ನಿಗದಿ ಪಡಿಸಿ ರುವ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಆ ಬೆಲೆಗೆ ತಮಗೇ ತರಕಾರಿ ಸಿಗುವುದಿಲ್ಲ ಎಂದು ವರ್ತಕರು ಸಮಜಾಯಿಷಿಕೆ ನೀಡಿದರು.