ಮಡಿಕೇರಿ, ಮೇ ೨೩: ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕೋವಿಡ್ ಚಿಕಿತ್ಸೆಗೆ ನೆರವಾಗುವಂತೆ ಹಲವರ ಪ್ರಯತ್ನದ ಮೂಲಕ ನ್ಯೂಜರ್ಸಿಯ ಸೇವಾ ಸಂಸ್ಥೆಯೊAದರ ಮೂಲಕ ರೂ. ೧೩ ಸಾವಿರ ಡಾಲರ್ ಮೌಲ್ಯದ ಆಕ್ಸಿಜನ್ ಕಾನ್ಸಟ್ರೇಟರ್ (ಆಮ್ಲಜನಕ ಉತ್ಪಾದನಾ ಯಂತ್ರ) ಅನ್ನು ಕೊಡುಗೆಯಾಗಿ ನೀಡಲಾಗಿದೆ.೧೦ ಲೀಟರ್ ಹಾಗೂ ೫ ಲೀಟರ್‌ನ ೫೩ ಘಟಕಗಳನ್ನು ಇಂದು ಸಂಸ್ಥೆಗೆ ಹಸ್ತಾಂತರಿಸ ಲಾಗಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಇದು ಅಗತ್ಯವಾಗಿದ್ದು, ಸದ್ಯದಲ್ಲಿ ಇನ್ನಷ್ಟು ಉಪಕರಣಗಳು ಬರಲಿರುವುದಾಗಿ ಇದರ ಹಿಂದೆ ಪ್ರಯತ್ನ ನಡೆಸಿರುವವರಲ್ಲಿ ಒಬ್ಬರಾದ ನಾಪೋಕ್ಲುವಿನ ಡಾ. ಸಣ್ಣುವಂಡ ಕಾವೇರಪ್ಪ ಅವರು ತಿಳಿಸಿದ್ದಾರೆ.ನಿವೃತ್ತ ಐಎಎಸ್ ಅಧಿಕಾರಿ ಅವರೆಮಾದಂಡ ಕೆ. ಮೊಣ್ಣಪ್ಪ ಅವರ ಪತ್ನಿಯ ಸಹೋದರಿ ಡಾ. ಚೊಟ್ಟೆರ ಶೋಭಾ (ಟುಟ್ಟು) ಅವರು ಅಮೇರಿಕಾದ ನ್ಯೂಜರ್ಸಿಯಲ್ಲಿ ಸೈಕ್ರಿಯಾಟಿಸ್ಟ್ ಆಗಿದ್ದಾರೆ. ಇಲ್ಲಿ ದೆಹಲಿಯ ಮೌಲನಾ ಆಜಾದ್ ಮೆಡಿಕಲ್ ಕಾಲೇಜಿನ ಬ್ಯಾಚೊಂದರ ಸಹಪಾಠಿಗಳು ಸೇರಿ ‘ಗೋ ಫಂಡ್ ಮಿ’ ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇದರ ಮುಖ್ಯಸ್ಥರಾಗಿ ಡಾ. ಶುಭಾವರ್ಮಾ, ಡಾ. ಮೀರಾವೆಲ್ಸ್ ಮತ್ತಿತರು ಇದ್ದು, ಇವರುಗಳ ಸಂಪರ್ಕ ಹೊಂದಿರುವ ಡಾ. ಚೊಟ್ಟೆರ ಶೋಭಾ (ಟುಟ್ಟು) ಅವರು ಕೊಡಗು ಜಿಲ್ಲೆಗೆ ಈ ಕೊಡುಗೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಈ ಪ್ರಯತ್ನದಂತೆ ಅವರು ಅವರೆಮಾದಂಡ ಮೊಣ್ಣಪ್ಪ, ಡಾ. ಕಾವೇರಪ್ಪ ಅವರುಗಳನ್ನು ಸಂಪರ್ಕಿಸಿದ್ದಾರೆ. ಇದರಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮೆಡಿಕಲ್ ಕಾಲೇಜಿನ ಡೀನ್ ಡಾ. ಕಾರ್ಯಪ್ಪ ಅವರುಗಳೊಂದಿಗೆ ಕೆಲದಿನಗಳ ಹಿಂದೆ ವ್ಯವಹರಿಸಲಾಗಿದ್ದು, ಇದಕ್ಕಾಗಿ ‘ವ್ಯಾಟ್ಸಾಪ್ ಗ್ರೂಪ್’ ವೊಂದನ್ನು ಪ್ರಾರಂಭಿಸಲಾಗಿತ್ತು. ಇದರಲ್ಲಿ ಇವರೊಂದಿಗೆ ಡಾ. ರೂಪೇಶ್, ಡಾ. ವಿಶಾಲ್ ಕುಮಾರ್ ಅವರುಗಳು ವ್ಯವಹರಿಸಿದ್ದು, ಈ ಮೂಲಕ ಇದೀಗ

(ಮೊದಲ ಪುಟದಿಂದ) ಆಕ್ಸಿಜನ್ ಕಾನ್ಸಟ್ರೇಟರ್ ಜಿಲ್ಲೆಗೆ ತಲುಪಿರುವುದಾಗಿ ಡಾ. ಕಾವೇರಪ್ಪ ಮಾಹಿತಿ ನೀಡಿದ್ದಾರೆ. ಈ ಉಪಕರಣಗಳನ್ನು ಇಂದು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭ ಡಾ. ಕಾರ್ಯಪ್ಪ, ಡಾ. ಕಾವೇರಪ್ಪ, ಡಾ. ರೂಪೇಶ್, ಡಾ. ಮಂಜುನಾಥ್, ಡಾ. ವಿಶಾಲ್ ಕುಮಾರ್ ಅವರುಗಳು ಹಾಜರಿದ್ದರು.