
ಮಡಿಕೇರಿ, ಮೇ ೨೩: ಕೊರೊನಾ ಪ್ರತಿಕೂಲ ಪರಿಸ್ಥಿತಿ ಇಡೀ ಪ್ರಪಂಚವನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಕೃತಿ ಮುನಿದರೆ ಏನಾಗುತ್ತದೆ ಎಂದು ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಮಹಾಮಳೆ ಪರೋಕ್ಷವಾಗಿ ಸಂದೇಶ ನೀಡಿದೆ. ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ದುರಂತಗಳಿಗೆ ಕಾರಣವಾಗಿವೆ. ಇಷ್ಟೆಲ್ಲ ನಡೆದರೂ ಸಸ್ಯ ಸಂಪತ್ತಿಗೆ ಕೊಡಲಿ ಹೆಚ್.ಜೆ. ರಾಕೇಶ್ಮಡಿಕೇರಿ, ಮೇ ೨೩: ಕೊರೊನಾ ಪ್ರತಿಕೂಲ ಪರಿಸ್ಥಿತಿ ಇಡೀ ಪ್ರಪಂಚವನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಕೃತಿ ಮುನಿದರೆ ಏನಾಗುತ್ತದೆ ಎಂದು ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಮಹಾಮಳೆ ಪರೋಕ್ಷವಾಗಿ ಸಂದೇಶ ನೀಡಿದೆ. ಪ್ರಕೃತಿಯ ಮೇಲೆ ಮಾನವನ ಹಸ್ತಕ್ಷೇಪ ದುರಂತಗಳಿಗೆ ಕಾರಣವಾಗಿವೆ. ಇಷ್ಟೆಲ್ಲ ನಡೆದರೂ ಸಸ್ಯ ಸಂಪತ್ತಿಗೆ ಕೊಡಲಿ ನೂರಾರೂ ಮರಗಳು ಹನನವಾಗಿದೆ ಎಂದು ಆರೋಪಿಸಿದ್ದಾರೆ.
ಮರಗೋಡು ಗ್ರಾಮದ ಬೆಟ್ಟದಂಚಿನಲ್ಲಿರುವ ದಟ್ಟಾರಣ್ಯದ ನೂರಾರೂ ಎಕರೆ ಪೈಸಾರಿ ಪ್ರದೇಶ ಇದೀಗ ತೋಟಗಳಾಗಿ ಮಾರ್ಪಟ್ಟಿವೆ. ದುರ್ಗಮ ಹಾದಿ, ಜನಸಂಚಾರ ವಿರಳ ಇರುವುದನ್ನೆ ಲಾಭವಾಗಿರಿಸಿ ಕೊಂಡಿರುವ ಲೂಟಿಕೋರರು ಕಳೆದ ಒಂದು ವರ್ಷಗಳಿಂದ ಮರಗಳನ್ನು ಕಡಿಯುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಪೈಸಾರಿ ಪ್ರದೇಶ ಒತ್ತುವರಿಯಾಗಿದೆ. ಖಾಲಿಯಿದ್ದ ಪ್ರದೇಶವನ್ನು ಕೆಲವು ಮಂದಿ ಕಳೆದ ಹಲವು ವರ್ಷಗಳಿಂದ
(ಮೊದಲ ಪುಟದಿಂದ) ಕಾಫಿ ತೋಟಗಳನ್ನಾಗಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ದುರ್ಗಮ ಹಾದಿಯಲ್ಲಿ ಮರಗಳ್ಳರ ಹಾವಳಿ ಮಿತಿಮೀರಿದ್ದು, ಅರಣ್ಯದಲ್ಲೇ ಮರ ಕಡಿದು ತುಂಡರಿಸಿ ಸಾಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮ ಚಟುವಟಿಕೆ
ಪೈಸಾರಿ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆದಿರುವುದನ್ನು ಗ್ರಾಮಸ್ಥರು ಬಯಲು ಮಾಡಿದ್ದಾರೆ. ಅರಣ್ಯ ಇಲಾಖೆ ಕೂಡ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದೆ. ಇದೊಂದು ಅಕ್ರಮ ಚಟುವಟಿಕೆ ಎಂದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಯಾವುದೇ ಅನುಮತಿ ಇಲ್ಲದೆ ಮರಗಳನ್ನು ಕಡಿದು ಸಾಗಾಟ ಮಾಡಿದ್ದಾರೆ. ೬ ನಂದಿ ಮರಗಳನ್ನು ಕಡಿದಿರುವುದು ತಿಳಿದುಬಂದಿದೆ ಎಂದು ಡಿಆರ್‌ಎಫ್‌ಓ ಸಚಿನ್ ‘ಶಕ್ತಿ’ಗೆ ತಿಳಿಸಿದ್ದಾರೆ.
ನೂರಾರು ಮರಕ್ಕೆ ಕೊಡಲಿ ಪೆಟ್ಟು.?
ಮರಗಳನ್ನು ಸ್ಥಳದಲ್ಲೆ ಕಡಿದು ತುಂಡರಿಸಿ ಸಾಗಾಟ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ‘ಶಕ್ತಿ’ಗೆ ತಿಳಿಸಿದ್ದಾರೆ. ಚೆಟ್ಟಳ್ಳಿ ಮೂಲದ ವ್ಯಕ್ತಿಯೊಬ್ಬರು ಅಕ್ರಮ ಚಟುವಟಿಕೆಯ ರೂವಾರಿ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ದುರ್ಗಮ ಹಾದಿಯಾಗಿರುವ ಹಿನ್ನೆಲೆ ಜನರು ಹೆಚ್ಚಾಗಿ ಈ ಭಾಗದಲ್ಲಿ ಸಂಚರಿಸುವುದಿಲ್ಲ. ಇದನ್ನೆ ಲಾಭ ಮಾಡಿಕೊಂಡು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಅದಲ್ಲದೆ ಕಳೆದ ಒಂದು ವರ್ಷಗಳಿಂದ ಮರ ಕಡಿತಲೆ ನಡೆಯುತ್ತಿದೆ. ಸ್ಥಳೀಯ ಕಾರ್ಮಿಕರನ್ನು ಬಳಸಿ ಮರವನ್ನು ಕಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ವಾರಕ್ಕೆ ೬ ರಿಂದ ೧೦ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ. ಇದುವರೆಗೂ ನೂರಾರೂ ಮರಗಳು ನಾಶವಾಗಿವೆ ಎಂದು ಹೇಳಲಾಗುತ್ತಿದೆ.
