ವೀರಾಜಪೇಟೆ, ಮೇ ೨೩: ಕೆಲವು ದಿನಗಳ ಹಿಂದೆ ಮನೆಯಿಂದ ಕಾಣೆಯಾದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವೀರಾಜಪೇಟೆ ಮೈತಾಡಿ ಗ್ರಾಮದಲ್ಲಿ ನಡೆದಿದೆ. ಕಾಣೆಯಾಗಿದ್ದ ಮೈತಾಡಿ ಭಟ್ಟಮಕ್ಕಿ ಗ್ರಾಮದ ನಿವಾಸಿ ವಿ.ಕೆ. ತಮ್ಮಯ್ಯ (೬೯) ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.
ಮೃತರು ಇಫ್ಕೋ ಕಂಪೆನಿಯ ಮಾಜಿ ಉದ್ಯೋಗಿಯಾಗಿದ್ದು ಮೈತಾಡಿ ಭಟ್ಟಮಕ್ಕಿಯಲ್ಲಿ ವಾಸವಾಗಿದ್ದರು. ಮೃತರ ಪತ್ನಿ ಸುಶೀಲ ಅವರು ೮ ತಿಂಗಳ ಹಿಂದೆ ನಿಧನರಾಗಿದ್ದರು. ತಾ. ೧೮ ರಂದು ಮಧ್ಯಾಹ್ನ ಮನೆಯಿಂದ ಊಟ ಮುಗಿಸಿ ಹೊರ ತೆರಳಿದ್ದರು ಎನ್ನಲಾಗಿದೆ. ಅಂದು ಸಂಜೆಯಾದರೂ ಮನೆಗೆ ಹಿಂದಿರುಗದ ಹಿನ್ನೆಲೆ ಮರುದಿನ ಸಂಬAಧಿಕರು, ಸ್ನೇಹಿತರ ಮನೆಯವರಿಗೆ ದೂರವಾಣಿ ಮಾಡಿ ಗ್ರಾಮದ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಷ್ಟೇ ಹುಡುಕಾಡಿದರೂ ತಮ್ಮಯ್ಯ ಸಿಗದ ಹಿನ್ನೆಲೆ ತಾ. ೨೦ ರಂದು
(ಮೊದಲ ಪುಟದಿಂದ) ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವುದಾಗಿ ದೂರು ನೀಡಲಾಗಿದೆ.
ದೂರು ಸ್ವೀಕರಿಸಿದ ಪೊಲೀಸರು ಮತ್ತು ಕುಟುಂಬಸ್ಥರು ಕಾಣೆಯಾಗಿರುವ ವ್ಯಕ್ತಿಯ ಶೋಧ ಕಾರ್ಯ ಮಂದುವರಿಸಿದ್ದರು. ತಾ. ೨೩ ರಂದು ಬೆಳಿಗ್ಗೆ ಮೃತರ ಮಗ ವಿ.ಟಿ. ಸುದೀಪ ಅವರು ದÀನ, ಕರುಗಳನ್ನು ಮನೆಯ ಸಮೀಪವಿರುವ ಕೆರೆಯ ಹತ್ತಿರ ಮೇಯಿಸಲು ಹೋದ ವೇಳೆಯಲ್ಲಿ ಕೆರೆಯಲ್ಲಿ ಮೃತದೇಹ ತೇಲುವ ಸ್ಥಿತಿಯಲ್ಲಿ ಗೋಚರಿಸಿದೆ. ಮೃತದೇಹ ಪತ್ತೆಯಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮೃತರ ಮಗ ವಿ.ಟಿ ಸುದೀಪ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.