(ವಿಶೇಷ ವರದಿ : ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು.ಮೇ.೨೩: ಕೊರೊನಾ ಸೋಂಕಿತರ ಪಾಲಿಗೆ ಆಶಾ ಕಿರಣವಾಗಿರುವ ಆಶಾ ಕಾರ್ಯಕರ್ತೆಯರ ದುಡಿಮೆ ಅತ್ಯಂತ ಅಪಾಯಕಾರಿ ಆದರೂ ಇರುವ ಸೌಲಭ್ಯಗಳಲ್ಲೆ ಪ್ರತಿದಿನ ಕೋವಿಡ್ ಸೋಂಕಿತ ವ್ಯಕ್ತಿಯ ಮನೆಗೆ ತೆರಳಿ ಅವರಿಗೆ ಬೇಕಾದ ಮಾತ್ರೆಗಳನ್ನು ತಪ್ಪದೇ ತಲುಪಿಸಿ ಸೋಂಕಿತ ವ್ಯಕ್ತಿಯನ್ನು ಗುಣಮುಖರಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇವರನ್ನು ಸರ್ಕಾರ ಫ್ರ್ರೆಂಟ್ಲೈನ್ ವಾರಿಯರ್ಸ್ ಆಗಿ ಪರಿಗಣಿಸಿದೆ.
ಕೇವಲ ಇವರನ್ನು ವಾರಿಯರ್ಸ್ ಆಗಿ ನೇಮಕ ಮಾಡಿದರೇ ಸಾಕೇ.? ಇವರ ಕಷ್ಟ ಕೇಳುವವರು ಯಾರು.?
ಇವರಿಗೆ ಮಾಸಿಕವಾಗಿ ರಾಜ್ಯ ಸರ್ಕಾರ ರೂ. ನಾಲ್ಕು ಸಾವಿರ ಗೌರವಧನ ನಿಗದಿಪಡಿಸಿದೆ. ಆದರೆ ಮಾರ್ಚ್ ತಿಂಗಳಿನಿAದ ಇಲ್ಲಿಯ ತನಕ ಇವರಿಗೆ ಸಿಗಬೇಕಾದ ಮಾಸಿಕ ಗೌರವ ಧನದಿಂದ ಇವರು ವಂಚಿತರಾಗಿದ್ದಾರೆ. ಇವರಿಗೆ ಸಿಗಬೇಕಾದ ವೇತನ ಸಕಾಲದಲ್ಲಿ ಸಿಗಬಾರದೇ.?