ಸೋಮವಾರಪೇಟೆ, ಮೇ ೨೦: ಕೊರೊನಾ ವೈರಸ್ ಸೋಂಕಿನಿAದ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಸ್ವಯಂಪ್ರೇರಣೆಯಿAದ ತೊಡಗಿಸಿಕೊಂಡಿರುವ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಯಾದ ಸೇವಾ ಭಾರತಿ ಸದಸ್ಯರು ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೇ ಮೃತದೇಹಗಳ ಅಂತಿಮ ವಿಧಿವಿಧಾನ ನೆರವೇರಿಸುವ ಮೂಲಕ ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುತ್ತಿದ್ದಾರೆ.

ತಮ್ಮ ಜೀವದ ಹಂಗು ತೊರೆದು ಮತ್ತೊಬ್ಬರ ಸಂಕಷ್ಟಕ್ಕೆ ಮಿಡಿಯುವ ಸೇವಾ ಮನೋಭಾವನೆ ಹೊಂದಿರುವ ಯುವ ಪಡೆಯ ಗುಂಪು, ಎಂತಹ ಸಂದರ್ಭದಲ್ಲೂ ಸಮಾಜ ಕಾರ್ಯದಿಂದ ಹಿಂದೆ ಬೀಳುವುದಿಲ್ಲ. ಮಳೆ, ಗಾಳಿಯನ್ನೂ ಲೆಕ್ಕಿಸದೇ ಇಂತಹ ಪುಣ್ಯ ಕಾರ್ಯದಲ್ಲಿ ತೊಡಗಿರುವ ಸೋಮವಾರಪೇಟೆ ಈ ತಂಡಕ್ಕೆ ಅವರ ಕುಟುಂಬವೂ ಬೆನ್ನೆಲುಬಾಗಿ ನಿಂತಿದೆ.

ಕೋವಿಡ್‌ನಿAದ ಮೃತಪಟ್ಟವರ ಅಂತ್ಯಸAಸ್ಕಾರವನ್ನು ಕುಟುಂಬಸ್ಥರು ನೆರವೇರಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಇದರೊಂದಿಗೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನೂ ಅಳವಡಿಸಿಕೊಳ್ಳಬೇಕಿದೆ. ಮೊದಲೇ ನೊಂದ ಕುಟುಂಬಕ್ಕೆ ಮತ್ತೆ ನೋವು ನೀಡಬಾರದು ಎಂಬ ಉದ್ದೇಶದಿಂದ ಕೋವಿಡ್ ಸೋಂಕಿತ ಮೃತದೇಹಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನೆರವೇರಿಸುತ್ತಿರುವ ಸೇವಾ ಭಾರತಿ ಸದಸ್ಯರು, ನಿಜಕ್ಕೂ ಸಮಾಜದ ಅಮೂಲ್ಯ ರತ್ನಗಳಾಗಿದ್ದಾರೆ.

ಕಳೆದ ವರ್ಷ ಆರಂಭವಾದ ಕೊರೊನಾ ವೈರಸ್ ಹಾವಳಿ ಈ ವರ್ಷ ವ್ಯಾಪಕವಾಗಿ ಹರಡಿ ಜನರ ಜೀವ ತೆಗೆಯುತ್ತಿದ್ದು, ನೂರಾರು ಮಂದಿಯ ಪ್ರಾಣ ಕಸಿದಿದೆ. ಸೋಮವಾರಪೇಟೆ ವ್ಯಾಪ್ತಿಯ ಸೇವಾ ಭಾರತಿಯ ಸದಸ್ಯರು ಕಳೆದ ವರ್ಷ ೧೦ ಹಾಗೂ ಈ ವರ್ಷ ಇಲ್ಲಿಯವರೆಗೆ ೩೭ ಮಂದಿ ಸೇರಿದಂತೆ ಒಟ್ಟು ೪೭ ಮಂದಿಯ ಅಂತ್ಯಸAಸ್ಕಾರ ನೆರವೇರಿಸಿದ್ದಾರೆ.

ಆರೋಗ್ಯ ಇಲಾಖೆಯಿಂದ ನೀಡುವ ಪಿಪಿಇ ಕಿಟ್‌ಗಳನ್ನು ಹಾಕಿ ಕೊಂಡು ಕುಟುಂಬದ ಸದಸ್ಯರಂತೆ ಅಂತ್ಯಕ್ರಿಯೆಯನ್ನು ನೆರವೇರಿಸುತ್ತಿರುವ ಸ್ವಯಂಸೇವಕರು, ಕುಟುಂಬದವರ ಅವರ ಪದ್ಧತಿಯಂತೆಯೇ ಮೃತದೇಹಕ್ಕೆ ಮುಕ್ತಿ ನೀಡುತ್ತಿದ್ದಾರೆ. ಕೊರೊನಾ ವೈರಸ್‌ನಿಂದ ಮರಣವನ್ನಪ್ಪಿದವರ ಬಗ್ಗೆ ಮಾಹಿತಿ ದೊರೆತೊಡನೇ ಸಿದ್ಧಗೊಳ್ಳುವ ಈ ತಂಡ, ತಮ್ಮದೇ ವಾಹನದಲ್ಲಿ ತೆರಳಿ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಕುಟುಂಬಸ್ಥರ ಸಮಕ್ಷಮ ಅಂತ್ಯಕ್ರಿಯೆ ನೆರವೇರಿಸುತ್ತಿದೆ.

ಅನಾಥ ಶವಕ್ಕೂ ಮುಕ್ತಿ: ಸೇವಾ ಭಾರತಿಯ ಸದಸ್ಯರು ಅನಾಥ ಶವಗಳಿಗೂ ಮುಕ್ತಿ ನೀಡುವ ಮೂಲಕ ಅನಾಥರಿಗೂ ಆಪತ್ಬಾಂಧವರಾಗಿದ್ದಾರೆ. ಪಟ್ಟಣದ ಮಾರುಕಟ್ಟೆಯಲ್ಲಿದ್ದ ಅನಾಥ ವ್ಯಕ್ತಿಯೋರ್ವ ಮೃತಪಟ್ಟಿದ್ದು, ಮರಣದ ನಂತರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಈ ಮೃತದೇಹವನ್ನೂ ಸಹ ಸೇವಾ ಭಾರತಿಯ ಸದಸ್ಯರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಸಮಾಜದ ಸೇವೆಯೇ ಭಗವಂತನ ಸೇವೆ ಎಂದು ತಮ್ಮ ಕಾಯಕದಲ್ಲಿ ತೊಡಗಿರುವ ಈ ತಂಡ ಗಾಳಿ, ಮಳೆ, ಬಿಸಿಲು, ಚಳಿಯನ್ನೂ ಲೆಕ್ಕಿಸದೇ, ಪಟ್ಟಣ, ಕುಗ್ರಾಮ ಎಂಬ ಭೇದ ತೋರದೇ, ಹಗಲು-ರಾತ್ರಿ ಎನ್ನದೇ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಅಂತ್ಯಸAಸ್ಕಾರ ನೆರವೇರಿಸುವ ಮೂಲಕ ಸಮಾಜ ಕಾರ್ಯದಲ್ಲಿ ತೊಡಗಿದೆ.

ಕಳೆದ ೨೦೧೮ರಲ್ಲಿ ನಡೆದ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಹಲವಷ್ಟು ಸೇವೆ ಸಲ್ಲಿಸಿರುವ ಈ ತಂಡ, ನಿರಾಶ್ರಿತರ ಸ್ಥಳಾಂತರ, ಆಹಾರ ವಿತರಣೆ, ಮನೆಗಳ ಸ್ವಚ್ಛತೆ, ಸಾಮಾಗ್ರಿಗಳ ಸಾಗಾಟ ಸೇರಿದಂತೆ ನಿರಾಶ್ರಿತರ ಶಿಬಿರಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ಕೊರೊನಾ ವೈರಸ್ ಇನ್ನಿಲ್ಲದ ಸಂಕಷ್ಟ ತಂದೊಡ್ಡುತ್ತಿದ್ದು, ತಮ್ಮ ಸಮಸ್ಯೆಗಳನ್ನೂ ಬದಿಗೊತ್ತಿ ಸಮಾಜದ ಹಿತಕ್ಕಾಗಿ ಮಿಡಿಯುವ ಇಂತಹ ಯುವ ಮನಸ್ಸುಗಳ ಕಾರ್ಯ ಇತರರಿಗೂ ಮಾದರಿಯಾಗಿದೆ.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ತಿಮ್ಮಯ್ಯ, ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಎಂ.ಬಿ. ಉಮೇಶ್, ಮಾದಾ ಪುರದ ಸುನಿಲ್, ಕೊಡ್ಲಿಪೇಟೆಯ ಮೋಕ್ಷಿತ್, ದಿನೇಶ್, ಶಾಂತಳ್ಳಿ ದಿವ್ಯ, ಸೇರಿದಂತೆ ಇತರ ಮುಖಂಡರ ನೇತೃತ್ವದಲ್ಲಿ ೩೦ಕ್ಕೂ ಅಧಿಕ ಸ್ವಯಂಸೇವಕರು ಈ ಸೇವಾ ಕಾರ್ಯದಲ್ಲಿ ನಿರತರಾಗಿದ್ದು, ನೊಂದವರ ಪಾಲಿಗೆ ಆಪತ್ಬಾಂಧ ವರಾಗಿದ್ದಾರೆ.

- ವಿಜಯ್ ಹಾನಗಲ್