ಮಡಿಕೇರಿ, ಮೇ ೨೧: ಕೊಡವ ಮತ್ತು ಕೊಡವ ಭಾಷಿಕ ಜನಾಂಗಗಳ ಒಕ್ಕ ಮೂಲ ಇತಿಹಾಸ, ಪದ್ಧತಿ ಪರಂಪರೆ, ನಡೆ ನುಡಿಗಳನ್ನೊಳಗೊಂಡ ಪುಸ್ತಕರೂಪದ ದಾಖಲೀಕರಣಕ್ಕೆ, ಕೊಡವಾಮೆರ ಕೊಂಡಾಟ ಸಂಘಟನೆ ಚಾಲನೆ ನೀಡಿದೆ.

ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೊಡವ ಜನಾಂಗ ಹಾಗೂ ಕೊಡವ ಭಾಷೆ ಪದ್ಧತಿ ಪರಂಪರೆಗಳನ್ನು ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬರುತ್ತಿರುವ ಕೊಡವ ಭಾಷಿಕ ಜನಾಂಗಗಳು ತಮ್ಮನ್ನು ತಾವು ಗುರುತಿಸಿಕೊಳ್ಳುವುದು ತಮ್ಮ ಒಕ್ಕ ಹೆಸರಿನಿಂದ. ಪ್ರತೀ ಒಕ್ಕಕ್ಕೆ ತನ್ನದೇ ಆದ ಹಿನ್ನೆಲೆ, ಇತಿಹಾಸ, ಮೂಲ ಮತ್ತು ಮಹತ್ವವಿದ್ದು, ಇದರ ಧಾಖಲೀಕರಣ ಮಾಡಿ ಪುಸ್ತಕ ರೂಪದಲ್ಲಿ

ಕಾಯ್ದಿರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದರಿಂದ ಮುಂದಿನ ಸಾವಿರಾರು ವರ್ಷಗಳಿಗೂ ಕೊಡವ ಇತಿಹಾಸದ ದಾಖಲೀಕರಣ ಅಚ್ಚಳಿಯದೇ ಉಳಿಯಲಿದೆ ಎಂಬ ಉದ್ದೇಶದೊಂದಿಗೆ ಈ ಕಾರ್ಯಕ್ಕೆ ಸಂಘಟನೆ ಮುಂದಾಗಿದೆ ಎಂದು ಅಧ್ಯಕ್ಷ ಚಾಮೆರ ದಿನೇಶ್ ತಿಳಿಸಿದ್ದಾರೆ.

ಕೊಡವ ಮತ್ತು ಕೊಡವ ಭಾಷಿಕ ಜನಾಂಗಗಳ ಒಕ್ಕ ಮೂಲ, ಇತಿಹಾಸ, ವಂಶವೃಕ್ಷ, ಪದ್ಧತಿ, ಪರಂಪರೆ, ನಡೆ ನುಡಿ, ಆಚಾರ ವಿಚಾರ, ಸಾಧನೆ ಸೇವೆ, ಹೀಗೇ ಎಲ್ಲಾ ವಿವರವನ್ನೊಳಗೊಂಡ ಮಾಹಿತಿಯನ್ನು, ಅಗತ್ಯ ಭಾವಚಿತ್ರದೊಂದಿಗೆ, ಆಯಾಯ ಒಕ್ಕದಿಂದ ಕಳುಹಿಸಿ ಕೊಡುವಂತೆ ಸಂಘಟನೆ ಮನವಿ ಮಾಡಿದೆ. ವಿವರ ಕಳುಹಿಸುವವರು ತಾವು ಅದೇ ಒಕ್ಕಕ್ಕೆ ಸೇರಿದವರು ಎನ್ನುವುದಕ್ಕೆ ಸಂಬAಧಿಸಿದAತೆ ಆಧಾರ್ ಕಾರ್ಡ್ ಅಥವಾ ಆರ್.ಟಿ.ಸಿ. ಅಥವಾ ಇನ್ಯಾವುದೇ ದೃಡೀಕರಣ ಹಾಗೂ ತಮ್ಮ ಇತ್ತೀಚಿನ ಒಂದು ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರ ಅಳವಡಿಸಿರಬೇಕು. ಮತ್ತು ತಮ್ಮ ಒಕ್ಕದ ಅರಿವು ಸರಿ ಇದೆ ಎನ್ನುವುದಕ್ಕೆ ಆಯಾ ಒಕ್ಕದ ಪಟ್ಟೆದಾರ, ಅಧ್ಯಕ್ಷ, ಕಾರ್ಯದರ್ಶಿ, ಇಲ್ಲವೇ ಐದು ಜನ ಸದಸ್ಯರು ಧೃಡೀಕರಿಸಿ, ಹೆಸರು, ಸಹಿ, ಮತ್ತು ವಿಳಾಸ ದೊಂದಿಗೆ ದೂರವಾಣಿ ಸಂಖ್ಯೆ ಲಗತ್ತಿಸಬೇಕು. ತಮ್ಮ ಬರಹವನ್ನು ನುಡಿಸಾಫ್ಟ್ವೇರ್‌ನಲ್ಲಿ ಕನ್ನಡ ಫಾಂಟ್ ಬಳಸಿ ಟೈಪ್ ಮಾಡಿ ಒಂದು ಮುದ್ರಿತ ಸೆಟ್ ಅನ್ನು ಅಧ್ಯಕ್ಷರು, ಕೊಡವಾಮೆರ ಕೊಂಡಾಟ (ರಿ), ಛಿ/o ಐIಅ ಸೇವಾ ಕೇಂದ್ರ, ಗ್ರಾಮ ಪಂಚಾಯಿತಿ ಕಟ್ಟಡ, ಬಸ್ ನಿಲ್ದಾಣ, ಗೋಣಿಕೊಪ್ಪ ಈ ವಿಳಾಸಕ್ಕೆ ಹಾಗೂ ಮತ್ತೊಂದು ಸಾಫ್ಟ್ ಕಾಪಿಯನ್ನು, ಞoಜಚಿvಚಿmeಡಿಚಿಞoಟಿಜಚಿಚಿಣಚಿ @gmಚಿiಟ.ಛಿom ಗೆ ಈಮೈಲ್ ಮೂಲಕ ಕಳುಹಿಸಿಕೊಡಬೇಕು. ಒಕ್ಕ ವಿವರವನ್ನು ಮುಂದಿನ ಆಗಸ್ಟ್ ೧೫ನೇ ತಾರೀಕಿನೊಳಗೆ ತಲುಪುವಂತೆ ಕಳುಹಿಸಬೇಕಿದೆ.

ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನೇತೃತ್ವದಲ್ಲಿ ನಡೆಯುವ ಈ ಐತಿಹಾಸಿಕ ದಾಖಲೀಕರಣಕ್ಕೆ, ಸರ್ವರೂ ಕೈಜೋಡಿಸುವಂತೆ ಸಂಘಟನೆ ಮನವಿ ಮಾಡಿದೆ.