ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ೧೧ ಗಂಟೆಯಿAದ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಶನಿವಾರ ಸುರಿದ ಧಾರಾಕಾರ ಮಳೆಯಿಂದಾಗಿ ನದಿ, ಹೊಳೆ, ಹಳ್ಳ ಕೊಳ್ಳಗಳಲ್ಲಿನ ನೀರಿನ ಮಟ್ಟ ಹೆಚ್ಚಾಗಿದೆ.

ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ವ್ಯಾಪ್ತಿಯಲ್ಲಿ ಮೇ. ೧೪ರ ಬೆಳಿಗ್ಗೆ ೬ ಗಂಟೆಯಿAದ ಮೇ. ೧೬ರ ಬೆಳಿಗ್ಗೆ ೬ ಗಂಟೆಯವರೆಗೆ ೯.೧೪ ಇಂಚು ಮಳೆ ಸುರಿದಿರುವದಾಗಿ ಅಮ್ಮಂಗೇರಿಯ ಕಣಿಯರ ನಾಣಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.

ರಸ್ತೆ ಕುಸಿತ: ಸಮೀಪದ ಬಲಮುರಿ ಈಶ್ವರ ದೇವಳಕ್ಕೆ ತೆರಳುವ ರಸ್ತೆಯ ಅರ್ಧಭಾಗ ಮಳೆಯ ಕಾರಣದಿಂದ ಕುಸಿದು ಬಿದ್ದಿದ್ದು, ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ.

ಚಿತ್ರ, ವರದಿಗಳು: ಸುನಿಲ್, ವಿಜಯ್, ಸಿಂಚು, ರಾಜುರೈ, ದಿನೇಶ್, ಜಗದೀಶ್, ಡಿ.ಎಂ.ಆರ್., ಚೆನ್ನನಾಯಕ, ಕೆ.ಕೆ.ಎನ್. ಶೆಟ್ಟಿ, ನೌಫಲ್, ವಾಸು, ಕಾಳಯ್ಯ, ಪ್ರಭಾಕರ್, ದುಗ್ಗಳ, ನರೇಶ್.