ಕಡಂಗ: ಶನಿವಾರ ರಾತ್ರಿ ಭಾರೀ ಗಾಳಿ ಮಳೆ ಉಂಟಾಗಿ ಕಡಂಗ ಎಡಪಾಲ ಮುಖ್ಯರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ .ಕಡಂಗ ಗ್ರಾಮದ ರಜಾಕ್ ಅÀವರ ಮನೆಯ ಹಿಂಬದಿ ಭೂ ಕುಸಿತ ಉಂಟಾಗಿದೆ. ಕಡಂಗ ಸುತ್ತುಮುತಲಿನಲ್ಲಿ ಭಾನುವಾರ ಮಳೆ ಕೊಂಚ ಕಡಿಮೆಯಾಗಿವೆ. ಗಾಳಿ ಮಳೆಯಿಂದ ವಿದ್ಯುತ್ ಸಂಪರ್ಕವೂ ಕಡಿತಗೊಂಡಿವೆ.

ಚೆಟ್ಟಳ್ಳಿ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶನಿವಾರ ರಾತ್ರಿ ಚೆಟ್ಟಳಿಯ ಮುಳ್ಳಂಡ ಐನ್‌ಮನೆಗೆ ತೆರಳುವ ರಸ್ತೆಯ ಮಧ್ಯೆ ಮರವೊಂದು ಬಿದ್ದಿದೆ. ಸ್ಥಳದ ಮಾಲೀಕರು, ಸ್ಥಳೀಯರ ನೆರವಿನಿಂದ ಮರವನ್ನು ತೆರವುಗೊಳಿಸಲಾಯಿತು