ಶಿಕ್ಷಕ ಮತ್ತು ವಿದ್ಯಾರ್ಥಿ ಸಂಬAಧ ಬ್ರಷ್ ಮತ್ತು ಬಿಳಿಹಾಳೆ ಇದ್ದಂತೆ. ಎರಡರ ಮಧ್ಯೆ ಸೌಹಾರ್ದತೆ ಇದ್ದಾಗ ಮಾತ್ರ ಒಂದು ಸುಂದರ ಚಿತ್ರಕಲೆ ರೂಪುಗೊಳ್ಳಬಹುದು. ಹಾಗೇ ಶಿಕ್ಷಕರ ಮಮತೆ ಬೆಸೆದ ಬೋಧನೆ ಇದ್ದರೆ ಮಾತ್ರ ವಿದ್ಯಾರ್ಥಿ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬಲ್ಲ. ಓರ್ವ ಯಶಸ್ವಿ ವಿದ್ಯಾರ್ಥಿ ಮಾಸ್ಟರ್ ಪೀಸ್ ಆಗಿ ಸಮಾಜಕ್ಕೆ ಕೊಡುಗೆ ಆಗಬಲ್ಲ. ಆದೆ ಕೊರೊನಾ ಸಂಕಷ್ಟ ದಿಂದಾಗಿ ಬ್ರಷ್ ಎಂಬುದು ಕ್ಯಾನ್ವಸ್‌ನಿಂದ ಬಹಳ ದೂರ ದಲ್ಲಿದೆ. ಆನ್‌ಲೈನ್ ಮೂಲಕ ಮಾರ್ಗದರ್ಶನ ಸಾಧ್ಯವಿದೆ. ಆದರೆ ಈ ವ್ಯವಸ್ಥೆಯಲ್ಲಿ ಖಂಡಿತ ವಾಗಿಯೂ ವಿದ್ಯಾರ್ಥಿಯ ಪ್ರತಿಭೆ ಗಳನ್ನೆಲ್ಲಾ ಬೆಳಕಿಗೆ ತಂದು ಮಾಸ್ಟರ್ ಪೀಸ್ ರೂಪಿಸಲು ಶಿಕ್ಷಕರಿಗೆ ಖಂಡಿತಾ ಅಸಾಧ್ಯ.

ಕೊರೊನಾ ದಿನಗಳಲ್ಲಿ ಶಾಲೆಗೇ ಬರಲಾಗದ ಅನಿವಾರ್ಯತೆಯ ದಿನಗಳಲ್ಲಿ ಆನ್‌ಲೈನ್ ಶಿಕ್ಷಣ ಎಂಬುದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಶಾಕಿರಣವೂ ಹೌದು. ಬೇರೇನೂ ಮಾಡಲಾಗದ ಪರಿಸ್ಥಿತಿಯಲ್ಲಿ ಇಷ್ಟಾದರೂ ಶೈಕ್ಷಣಿಕ ಮಾರ್ಗದರ್ಶನ ದೊರಕುತ್ತಿದೆಯಲ್ಲ ಎಂಬ ಸಮಧಾನ ಅಗತ್ಯ. ಆದರೆ ಆನ್‌ಲೈನ್ ಶಿಕ್ಷಣದ ಗುರಿ ತಲುಪುವಲ್ಲಿ ಪ್ರತೀ ವಿದ್ಯಾರ್ಥಿಯೂ ಪಡಬೇಕಾದ ಶ್ರಮ ಇದೆಯಲ್ಲ. ಅದು ನಿರೀಕ್ಷೆಗೂ ಮೀರಿದ್ದು.

ವಿದ್ಯಾರ್ಥಿಗಳ ಮೂಲಶಿಕ್ಷಣವೇ ಸರಿ ಇಲ್ಲದೇ ಹೋದಲ್ಲಿ ಭವಿಷ್ಯದಲ್ಲಿ ಖಂಡಿತಾ ಕಷ್ಟವಾಗಲಿದೆ. ಅಡಿಪಾಯವೇ ಗಟ್ಟಿ ಇಲ್ಲದೇ ಹೋದಲ್ಲಿ ಸುಭದ್ರ ಕಟ್ಟಡ ಹೇಗೆ ನಿರ್ಮಾಣ ಮಾಡಲು ಸಾಧ್ಯವಿಲ್ಲವೋ ಹಾಗೇ ಮೂಲಶಿಕ್ಷಣ ದೊರಕದೇ ಹೋದಲ್ಲಿ ಸುಭದ್ರ ಸಮಾಜ, ದೇಶ ವನ್ನೂ ಭವಿಷ್ಯದಲ್ಲಿ ನಿರ್ಮಿಸ ಲಾಗದು.

ಮುಂದಿನ ದಿನಗಳಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಗತ್ಯ ಮಾರ್ಪಾಡು ಬೇಕೇಬೇಕು. ಅಂಕಗಳಿಗೆ ಪಠ್ಯವೇ ಮಾನದಂಡ ವಾಗಬಾರದು. ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಯ ವಿಮರ್ಶೆ ನಡೆಯಬೇಕು. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕ - ವಿದ್ಯಾರ್ಥಿ ನಡುವಿನ ಶೈಕ್ಷಣಿಕ ಸಂಬAಧ ಮತ್ತಷ್ಟು ಗಟ್ಟಿಗೊಳ್ಳ ಬೇಕು. ಬೇರೆ ಬೇರೆ ಕಾರ್ಯ ಯೋಜನೆಗಳ ಒತ್ತಡದಿಂದ ಸರ್ಕಾರ ಶಿಕ್ಷಕರನ್ನು ವಿದ್ಯಾರ್ಥಿ ಗಳಿಂದ ದೂರ ಇರಿಸುವುದು ತಪ್ಪಬೇಕು. ಮುಂದಿನ ದಿನಗಳಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಗುರು-ಶಿಷ್ಯನ ಸೌಹಾರ್ದ ಸಂಬAಧ ಮತ್ತಷ್ಟು ಬಲ ಗೊಳ್ಳಬೇಕಾ ಗಿದೆ. ಅನಿವಾರ್ಯ ಕೂಡ.

(ಸಶೇಷ)

-ನೀತಾ ಮೋಹನ್, ಅಧ್ಯಾಪಕಿ, ಕಾಲ್ಸ್, ಗೋಣಿಕೊಪ್ಪ.