ಭತ್ತದ ಫಸಲು ಬೆಂಕಿ ರೋಗಕ್ಕೆ ತುತ್ತಾದಂತಾಗಿದೆ ವಿದ್ಯಾರ್ಥಿಗಳ ಭವಿಷ್ಯ!..
...
ಭತ್ತದ ಕೃಷಿ ಫಸಲು ಗರ್ಭಾವಸ್ಥೆಗೆ ಬರುವ ವೇಳೆಗೆ ದಿಢೀರನೇ ಸಂಭವಿಸಿದ ಬೆಂಕಿರೋಗಕ್ಕೆ ತುತ್ತಾದ ರೀತಿಯಲ್ಲಿ ಇದೀಗ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಮೇಲೆ ಗರಬಡಿದಂತಾಗಿದೆ.
ಪ್ರತಿಯೋರ್ವರೂ ಕೋವಿಡ್ನಿಂದ ಪಾರಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಅಂಶವಾದರೂ ಭವಿಷ್ಯತ್ತಿನ ದೃಷ್ಟಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆ ಕೂಡ ಅಷ್ಟೇ ಮುಖ್ಯವಾದುದು.
ಕೊರೊನಾ ಉಲ್ಬಣ ಗೊಂಡAತೆ ಕಳೆದ ೧೫ ದಿನಗಳಿಂದ ಇಡೀ ಶಿಕ್ಷಣ ವ್ಯವಸ್ಥೆಯೇ ಏರುಪೇರಾಗಿದೆ. ಈ ಬಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಿತ್ತಾದರೂ ಪ್ರೌಢಶಿಕ್ಷಣ, ಪಿಯುಸಿ ಮತ್ತು ಪದವಿ ತರಗತಿಗಳು, ಇಂಜಿನಿಯರಿAಗ್, ವೈದ್ಯಕೀಯ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣ ಕೋರ್ಸ್ಗಳಿಗೆ ತುಂಬಾ ತೊಂದರೆಯಾಗಿದೆ.
ಕಳೆದ ವರ್ಷ ಶಾಲೆಯ ಭೌತಿಕ ತರಗತಿ ಬದಲಿಗೆ ಆಗಸ್ಟ್ನಲ್ಲಿ ಆರಂಭಗೊAಡ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅಕ್ಟೋಬರ್ ಮಧ್ಯಕ್ಕೆ ಸ್ಥಗಿತಗೊಳಿಸಲಾಯಿತು.
ತದನಂತರ ಜನವರಿ ೨೦೨೧ ರಿಂದ ಪ್ರೌಢಶಾಲೆಗೆ ಭೌತಿಕ ತರಗತಿಗಳು ಆರಂಭಗೊAಡವು. ಕೊರೊನಾ ಹೆಚ್ಚುತ್ತಿದ್ದಂತೆ ಇದೇ ಏಪ್ರಿಲ್ ೨೦ ರ ನಂತರ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಲಾಯಿತು.
ವಿದ್ಯಾಗಮದಲ್ಲಿ ಶಾಲೆಯ ಹೊರಗಡೆ ಎಲ್ಲಾ ಮಕ್ಕಳನ್ನು ಒಂದೆಡೆ ಕೂರಿಸಲಾಗದೇ ಪಾಠ ಹೇಳಿಕೊಟ್ಟರೂ ಅದು ಅಷ್ಟೊಂದು ಪರಿಣಾಮಕಾರಿ ನಿರೀಕ್ಷಿತ ಫಲ ನೀಡಲಿಲ್ಲ. ನಂತರ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಪಠ್ಯದಲ್ಲಿ ಶೇ. ೩೦ ರಷ್ಟು ಪಠ್ಯವನ್ನು ಕಡಿತಗೊಳಿಸಲಾಯಿತು. ಉಳಿದ ಶೇ. ೭೦ ಭಾಗದಷ್ಟು ಪಠ್ಯವನ್ನು ಲಭ್ಯವಿರುವ ೩-೪ ತಿಂಗಳಲ್ಲಿ ಪೂರ್ಣಗೊಳಿಸಿ ಪುನಾರಾವರ್ತನೆಯೊಂದಿಗೆ ಅಂತಿಮವಾಗಿ ಪರೀಕ್ಷೆಗೆ ಸಿದ್ಧಪಡಿಸುವಷ್ಟರಲ್ಲಿ ಮತ್ತೆ ಏಪ್ರಿಲ್ ಕೊನೇ ವಾರದಲ್ಲಿ ಲಾಕ್ಡೌನ್ ಹೇರಿದ ಕಾರಣ ಶಾಲಾ - ಕಾಲೇಜುಗಳು ಅನಿವಾರ್ಯವಾಗಿ ಮುಚ್ಚಬೇಕಾಯಿತು.
ಇದರಿಂದಾಗಿ ಇದೀಗ ಹಿಂದಿನAತೆಯೇ ಈ ಮಕ್ಕಳಿಗೆ ಶಿಕ್ಷಕರು/ಉಪನ್ಯಾಸಕರು ಪ್ರತಿನಿತ್ಯ ಆನ್ಲೈನ್ ಮೂಲಕ ಪಾಠ ಬೋಧನೆಗೆ ಮೊರೆ ಹೋಗಲಾಗಿದೆ. ಆದರೆ, ಇದರಿಂದ ಆಂಡ್ರಾಯ್ಡ್ ಮೊಬೈಲ್ ಇರದ ಬಡವರ್ಗದ ಮಕ್ಕಳು ಹಾಗೂ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿರುವ ಗ್ರಾಮಾಂತರ ಪ್ರದೇಶದ ಮಕ್ಕಳಿಗಂತೂ ಆನ್ಲೈನ್ ಶಿಕ್ಷಣ ಕನಸ್ಸಾಗಿದೆ. ಕೋವಿಡ್ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಆನ್ಲೈನ್ ಕಲಿಕೆ ಅನಿವಾರ್ಯತೆ ಇದ್ದರೂ ಇದು ಕಷ್ಟಸಾಧ್ಯವಾಗಿದೆ.
ಮಕ್ಕಳಿಗೆ ಪರೀಕ್ಷೆ ಇದ್ದರೆ ಮಾತ್ರ ಅವರ ಜ್ಞಾನ ಬೆಳೆದು ಮುಂದಿನ ತರಗತಿಗೆ ತೇರ್ಗಡೆ ಹೊಂದಲು ಸಾಧ್ಯ. ಪರೀಕ್ಷೆಯ ಮಾನದಂಡವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲೇಬಾರದು.
ಕೋವಿಡ್ ಕ್ಷೀಣಿಸಿದರೆ ಪರೀಕ್ಷೆ ತಡವಾದರೂ ಪರವಾಗಿಲ್ಲ. ಪರೀಕ್ಷೆಗೆ ಮುನ್ನ ಆ ಮಕ್ಕಳಿಗೆ ಕೆಲದಿನಗಳ ಕಾಲ ಭೌತಿಕ ತರಗತಿಗಳನ್ನು ನಡೆಸಿ ಮಕ್ಕಳಿಗೆ ಕ್ಲಿಷ್ಟಕರ ವಿಷಯಗಳನ್ನು ಮನದಟ್ಟು ಮಾಡಿ ನಂತರ ಪರೀಕ್ಷೆ ನಡೆಸಬಹುದು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ಹೊರತುಪಡಿಸಿದರೆ ಉನ್ನತ ಶಿಕ್ಷಣದ ಕೋರ್ಸ್ಗಳು ಈಗಾಗಲೇ ೬ ತಿಂಗಳ ಕಾಲ ಹಿನ್ನೆಡೆ ಯಾಗಿದೆ. ಈ ಲಾಕ್ಡೌನ್ನಿಂದ ಇದು ಮತ್ತಷ್ಟು ವಿಳಂಬವಾಗಿ ಪದವಿ, ಇಂಜಿನಿಯರಿAಗ್, ವೈದ್ಯಕೀಯ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ಗಳಿಗೆ ಮತ್ತಷ್ಟು ತೊಂದರೆಯಾಗಲಿದೆ. ವಿದ್ಯಾರ್ಥಿಗಳ ಆತಂಕ ದೂರ ಮಾಡುವ ಯಾವುದೇ ಪ್ರಯತ್ನ ಆಗಿಲ್ಲ. ಪರೀಕ್ಷೆ ತಡವಾದರೂ ಪರವಾಗಿಲ್ಲ, ಆದರೆ, ಕೊರೊನಾ ಕಡಿಮೆಯಾದಂತೆ ಉಳಿದ ಕೋರ್ಸ್ಗಳಿಗೆ ಸ್ವಲ್ಪ ಪ್ರಮಾಣದಲ್ಲಿಯಾದರೂ ಭೌತಿಕ ತರಗತಿ ನಡೆಸಿದ ನಂತರ ಅಂತಿಮ ಪರೀಕ್ಷೆ ನಡೆಸುವುದು ಸೂಕ್ತ.
ಇದರೊಂದಿಗೆ ಬಹು ಮುಖ್ಯವಾಗಿ ಆಗಬೇಕಾಗಿರುವುದು ಎಂದರೆ, ಮುಂದಿನ ಹಂತದ ತರಗತಿಗಳಿಗೆ ಶೈಕ್ಷಣಿಕ ಹಿತದೃಷ್ಟಿ ಯಿಂದ ಮೌಲ್ಯಮಾಪನ ಕಾರ್ಯ ಹಾಗೂ ತೇರ್ಗಡೆಗೆ ಕೈಗೊಳ್ಳಬೇಕಾದ ಮಾನದಂಡಗಳನ್ನು ಮರು ಮಾರ್ಪಾಡು ಮಾಡುವ ಕುರಿತು ಸರ್ಕಾರ ಮತ್ತು ಶಿಕ್ಷಣ ತಜ್ಞರು ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ.
(ಸಶೇಷ)
- ಟಿ.ಜಿ. ಪ್ರೇಮಕುಮಾರ್, ಮುಖ್ಯೋಪಾ ಧ್ಯಾಯರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು