ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಮರು ಪಾವತಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಒಂದು ವರ್ಷದ ಕಾಲಾವಕಾಶ ನೀಡುವಂತೆ ಸಚಿವರಲ್ಲಿ ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮನವಿ ಮಾಡಿದರು.

ಈ ಬಗ್ಗೆ ರೈತರ ಮನವಿಗೆ ಉತ್ತರಿಸಿದ ಸಚಿವರು ತಾ. ೧೮ ರಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಲ್ಲಿನ ಶಾಸಕರ ಸಮ್ಮುಖದಲ್ಲಿ ಭೇಟಿ ಮಾಡಿ ಈ ಬಗ್ಗೆ ಗಮನ ಸೆಳೆಯುವೆ. ಒಂದು ವರ್ಷ ಕಷ್ಟವಾಗಬಹುದು. ಕನಿಷ್ಟ ಮುಂದಿನ ಆರು ತಿಂಗಳಿಗೆ ಸಾಲ ಮರುಪಾವತಿಯ ಅವಧಿ ವಿಸ್ತರಣೆ ಮಾಡುವ ಭರವಸೆ ನೀಡಿದರು.