ಪೊನ್ನಂಪೇಟೆ, ಮೇ ೧೬: ಕೊರೊನ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಮಾಸ್ಕ್, ಸ್ಯಾನಿಟೈಸರ್, ಕೈಗವಸು, ಫೇಸ್ ಶೀಲ್ಡ್, ಥರ್ಮಲ್ ಸ್ಕಾö್ಯನರ್ ಹಾಗೂ ಆಕ್ಷಿಮೀಟರ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ಗ್ರಾ. ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್, ಪಿಡಿಓ ಪುಟ್ಟರಾಜು ಹಾಗೂ ಗ್ರಾ. ಪಂ. ಸಿಬ್ಬಂದಿ ಇದ್ದರು.