ಕೇರಳ ಕಾಲಡಿ ಎಂಬ ಗ್ರಾಮದಲ್ಲಿ ಶ್ರೀ ಶಂಕರಚಾರ್ಯರ ಜನನ. ಶಿವಗುರು - ಸತಿದೇವಿ ಎನ್ನುವ ನಂಬೂದರಿ ಬ್ರಾಹ್ಮಣ ದಂಪತಿಗಳ ಮಗನಾಗಿ ಕ್ರಿ.ಶ. ೭೮೦ ಮೇ ೧೭ ರಂದು ಜನಿಸಿದರು. ಬಾಲ್ಯದಲ್ಲಿ ಶಂಕರಾಚಾರ್ಯರು ಪ್ರತಿಭಾವಂತ ಬಾಲಕನಾಗಿದ್ದರು. ಬಾಲ್ಯಾವಸ್ಥೆಯಲ್ಲಿಯೇ ಅವರ ತಂದೆ ತೀರಿಕೊಂಡರು. ತಾಯಿಗೆ ಈ ಆಘಾತದಿಂದ ಹೆಚ್ಚಿನ ಜವಾಬ್ದಾರಿ ಉಂಟಾಗಿ ಮಗನಿಗೆ ಮದುವೆ ಮಾಡಬೇಕೆಂಬ ಹಂಬಲ. ಆದರೆ ಶಂಕರರ ಮನಸ್ಸೆಲ್ಲಾ ಸನ್ಯಾಸತ್ವದ ಕಡೆಗೆ. ತಾಯಿಯನ್ನು ಸಮಾಧಾನಗೊಳಿಸಿ ಅವರ ಮನಸ್ಸಿಗೆ ನೋವಾಗದಂತೆ ಸನ್ಯಾಸಿಯಾಗುವತ್ತ ಸಾಗಿದರು.

ಕಠಿಣ ಪರಿಶ್ರಮ, ದೃಢಚಿತ್ತದಿಂದ ನರ್ಮದಾ ನದಿ ತೀರದಲ್ಲಿದ್ದ ದೊಡ್ಡ ಗುರುಗಳೂ, ಮಹಾ ಪಂಡಿತರೂ ಆದ ಗೋವಿಂದ ಭಗವತ್ಪಾದರ ಶಿಷ್ಯರಾಗಿ ಶಾಸ್ತç ಗ್ರಂಥಗಳನ್ನೆಲ್ಲಾ ಅಧ್ಯಯನ ಮಾಡಿದ್ದರು. ಹೆಚ್ಚಿನ ಜ್ಞಾನಗಳಿಸಲು ಕಾಶಿಗೆ ಹೋದರು. ಅಲ್ಲಿ ವಿದ್ವಾಂಸರ ಜೊತೆಗೂಡಿ ಅದ್ವೆöÊತ ಮಾರ್ಗದ ಕುರಿತು ವಾದ ಮಾಡಿ ಗೆದ್ದರು. ಅದ್ವೆöÊತ ಎಂದರೆ ಎಲ್ಲವೂ ಒಂದೇ. ಎಲ್ಲವೂ ಬ್ರಹ್ಮ ಎಂಬುದೇ ತತ್ವ ಪಾರಮಾರ್ಥಕವಾಗಿ ಮೇಲು, ಕೀಳು ಎನ್ನುವ ಸಂಕುಚಿತ ಮನೋಭಾವನೆ ಇರಕೂಡದು. ನಾವೆಲ್ಲರೂ ಒಂದೇ ಎಂದು ಹೇಳಿ ಅದ್ವೆöÊತದ ಮಹಿಮೆಯನ್ನು ಲೋಕಕ್ಕೆ ಸಾರಿದರು.

ಸನ್ಯಾಸಿಯಾದರೂ ಶಂಕರಾಚಾರ್ಯರು ಮಾತೃ ಪ್ರೇಮವನ್ನು ಮೆರೆದು ಅನಾರೋಗ್ಯಕ್ಕೆ ತುತ್ತಾದ ತಾಯಿಯ ಸೇವೆಗೆಂದು ಹುಟ್ಟೂರಾದ ಕಾಲಡಿಗೆ ತೆರಳಿದರು. ಅವರ ಆರೈಕೆಯನ್ನು ತೃಪ್ತಿ ಪ್ರೀತಿಯಿಂದ ಮಾಡಿದರು. ಅವರ ತಾಯಿ ಅಲ್ಲಿಯೇ ನಿಧನರಾದರು. ಶಂಕರಾಚಾರ್ಯರು ಉಪನಿಷತ್ತು, ಗೀತೆ, ಬ್ರಹ್ಮ ಸೂತ್ರಗಳಿಗೆ ವಿದ್ವತ್ಪೂರ್ಣವಾದ ವಿಷಯ ಗಳನ್ನು ಬರೆದರು. ದೇವರಿಲ್ಲವೆಂದು ಹೇಳು ವವರನ್ನು ತೀವ್ರವಾಗಿ ವಿರೋಧಿಸಿದರು. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಅದ್ವೆöÊತ ಮಾರ್ಗವನ್ನು, ಧರ್ಮವನ್ನು ಪ್ರಚಾರ ಮಾಡಿದರು. ಸಂಸ್ಕೃತದಲ್ಲಿ ಸೊಗಸಾದ ದೇವರ ಸ್ತೋತ್ರಗಳನ್ನು ರಚಿಸಿ ದರು. ಧರ್ಮ ಮತ್ತು ಭಕ್ತಿಗೆ ಒತ್ತು ನೀಡಿದರು. ಈಗಿನ ಅಲಹಾಬಾದ್‌ನಲ್ಲಿ ಆಗಿನ ಪ್ರಯಾಗದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವನ್ನು ಪ್ರಾರಂಭಿಸಿದರು.

ಕರ್ನಾಟಕದಲ್ಲಿರುವ ವಿಶ್ವ ಪ್ರಸಿದ್ಧ ಶೃಂಗೇರಿ ಮಠವನ್ನು ಶಂಕರಾಚಾ ರ್ಯರು ಸ್ಥಾಪಿಸಿದರು. ಇದೂ ಅಲ್ಲದೆ ಭಾರತದಾದ್ಯಂತ ಏಳು ಮಠಗಳನ್ನು ಅವರು ಸ್ಥಾಪಿಸಿದರು.

ಶ್ರೀಸಾಮಾನ್ಯನಿಗೂ ಅರ್ಥವಾಗುವಂತೆ ಬರೆದಿರುವ ಅವರ ಮೋಹಮುದ್ಗರ ಅಥವಾ ದ್ವಾದಶ ಮಂಜರಿಕ ಸ್ತೋತ್ರಮ್ ತುಂಬಾ ಚಿಕ್ಕ ಕೃತಿಯಾದರೂ ವೇದಾಂತ ತತ್ವಗಳನ್ನು ಸರಳವಾಗಿ ತಿಳಿಸಿ ಹೇಳುವುದರಲ್ಲಿ ಯಶಸ್ಸು ಕಂಡಿದೆ. ಜೀವನದಲ್ಲಿ ಸತ್ಯ ದರ್ಶನಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವ ಮಾರ್ಗದರ್ಶನ ನೀಡುವ ಭಗವದ್ಗೀತೆಯನ್ನು ವ್ಯಾಸರು ಸುಮಾರು ಏಳುನೂರು ಶ್ಲೋಕಗಳಲ್ಲಿ ವಿವರಿಸಿದ್ದಾರೆ. ಶಂಕರಾಚಾರ್ಯರು ಅದನ್ನು ಇನ್ನೂ ಸರಳಗೊಳಿಸಿ ಕೇವಲ ಹನ್ನೆರಡು ಪದ್ಯಗಳಲ್ಲಿ ಅರ್ಥವತ್ತಾಗಿ ತಿಳಿಸಿ ಹೇಳಿದ್ದಾರೆ. ಭಜಗೋವಿಂದA ಮೂಢಮತೇ ಎಂದೇ ಖ್ಯಾತರಾಗಿದ್ದಾರೆ.

ಸುಮಾರು ಹದಿನಾಲ್ಕು ಶತಮಾನಗಳ ಹಿಂದೆಯೇ ಚರ್ಚೆ, ವಾದ, ಪ್ರಶ್ನೋತ್ತರಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಮಾದರಿಯನ್ನು ಆಚರಿಸಿ ತೋರಿಸಿದವರು ಶಂಕರಾಚಾರ್ಯರು. ಈ ಹಿನ್ನೆಲೆಯಲ್ಲಿ ಶಂಕರರ ಜೀವನದಲ್ಲಿ ಮಹತ್ವದ ಘಟನೆಗಳಲ್ಲಿ ಒಂದಾದ ಮಂಡನ ಮಿಶ್ರದೊಡನೆ ಚರ್ಚೆ, ವಾದ ಇಂದಿಗೂ ಪ್ರಸ್ತುತವೆನಿಸುತ್ತದೆ. ಈ ವಾದದಲ್ಲಿ ಮಂಡನ ಮಿಶ್ರರ ಪತ್ನಿ ಭಾರತೀದೇವಿ ತೀರ್ಪುಗಾರರಾಗಿ ತುಂಬಿದ ಸಭೆಯಲ್ಲಿ ಶಂಕರರು ಗೆದ್ದರೆಂದು ತೀರ್ಪಿತ್ತು, ನಮ್ಮನ್ನು ನಿಮ್ಮ ಶಿಷ್ಯರಾಗಿ ಸ್ವೀಕರಿಸಿ ಎಂದು ವಿನಂತಿಸಿಕೊAಡಳು. ಹೀಗೆ ಶಂಕರರು ಜೀವನದ ಎಲ್ಲಾ ಅಗ್ನಿಪರೀಕ್ಷೆಗಳಲ್ಲಿ ಗೆದ್ದು ಜಗತ್ತಿಗೆ ಮಾರ್ಗದರ್ಶಕರಾದರು. ತಮ್ಮ ಆಚಾರ - ವಿಚಾರಗಳಿಂದ ಜಗತ್ತಿನ ಎಲ್ಲಾ ಜೀವಿಗಳಿಗೆ ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತದೆಡೆಗೆ ಸಾಗುವ ದಾರಿ ತೋರಿದರು. ಹಾಗಾಗಿ ವಿಶ್ವ ಅವರನ್ನು ಜಗದ್ಗುರು ಎಂದು ಗೌರವಿಸುತ್ತದೆ.

ಮೂವತ್ತೆರಡು ವರ್ಷಗಳ ತಮ್ಮ ಆಯುಷ್ಯದಲ್ಲಿ ಇಷ್ಟೊಂದು ಕೆಲಸ ಮಾಡಿದ್ದು, ಅವರು ಈಶ್ವರ ಸ್ವರೂಪಿಯೆಂದೂ, ದೈವಾಂಶ ಸಂಭೂತರೆAಬುದನ್ನು ದೃಢಪಡಿಸುತ್ತದೆ. ಇವರು ಕಾಶ್ಮೀರದಲ್ಲಿ ಸರ್ವಜ್ಞ ಪೀಠವನ್ನೇರಿದ್ದರು. ಕೊನೆಗೆ ಕೇದಾರ ಕ್ಷೇತ್ರದ ಗುಹೆಯಲ್ಲಿ ಅಂತರ್ದಾನರಾದರು.

- ಗೌರಮ್ಮ ಮಾದಮ್ಮಯ್ಯ, ಮಡಿಕೇರಿ.