ತನಗೆ ಎರಡನೇ ಬಾರಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷಳಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು, ಸಿಕ್ಕ ಅವಕಾಶ ಸದುಪಯೋಗವಾಗಿದೆ. ಒಂದು ರೀತಿಯಲ್ಲಿ ಸವಾಲಿನಂತಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಐದು ವರ್ಷಗಳಲ್ಲಿನ ಸೇವೆ ಸಮಾಧಾನ ತಂದಿದೆ. ಶಾಸಕರಾದಿಯಾಗಿ ಸದಸ್ಯರುಗಳು, ಕಾರ್ಯನಿರ್ವಹಣಾಧಿಕಾರಿಗಳು, ಅಧಿಕಾರಿಗಳು ಎಲ್ಲ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ತನ್ನಿಂದ ಸಹಾಯ, ಸೌಲಭ್ಯ ಪಡೆದುಕೊಂಡವರಿಗೆ ಈಗಲೂ ಕೃತಜ್ಞತೆೆಯಿದೆ. ಈಗಲೂ ವಿವಿಧ ಹಂತದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ. ಮುಂದೆಯೂ ಮಾಡುವೆ.
-ತೆಕ್ಕಡೆ ಶೋಭಾ ಮೋಹನ್, ಮಾಜಿ ಅಧ್ಯಕ್ಷರು, ಮಡಿಕೇರಿ ತಾ.ಪಂ