ಕೇವಲ ಮನೆ, ಮಕ್ಕಳು, ತೋಟ ಅಂತೆಲ್ಲ ನಮ್ಮದೇ ಕೆಲಸದಲ್ಲಿದ್ದ ನಮ್ಮಂತವರಿಗೆ ಸಮಾಜಸೇವೆ ಮಾಡಲು ಸಿಕ್ಕ ಒಂದು ಅವಕಾಶ ಇದು. ಮೊದಲ ಬಾರಿಗೆ ರಾಜಕೀಯ ಪ್ರವೇಶ ಒಳ್ಳೆಯ ಅನುಭವ ನೀಡಿದೆ. ಸಮಾಜದಲ್ಲಿ, ಜನರೊಂದಿಗೆ ಹೇಗಿರಬೇಕು, ಕಚೇರಿಗಳಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಿಸಬಹುದೆಂಬದನ್ನು ತಿಳಿಸಿಕೊಟ್ಟಿದೆ. ತನ್ನ ಐದು ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ, ಶಾಸಕರ ಬೆಂಬಲ, ಮಾಧ್ಯಮದವರ ಪ್ರೋತ್ಸಾಹ ಹಾಗೂ ಅಧಿಕಾರಿಗಳ ಸಹಕಾರ ಚೆನ್ನಾಗಿತ್ತು. ಇನ್ನು ಮುಂದಕ್ಕೂ ಸೇವೆ ಮಾಡಲು ಸಹಕಾರಿಯಾಗಿದೆ.