ವೈದ್ಯಕೀಯ ಪರಿಭಾಷೆಯಲ್ಲಿ ರಕ್ತದಲ್ಲಿನ ಆಮ್ಲಜನಕದ ಭಾಗಶಃ ಒತ್ತಡದಲ್ಲಿನ ಇಳಿಕೆಯನ್ನು ಹೈಪಾಕ್ಸಿಯ ಎನ್ನುತ್ತಾರೆ. ಹೈಪಾಕ್ಸಿಯದ ಮೊದಲನೆಯ ಲಕ್ಷಣವೆಂದರೆ ಉಸಿರಾಟದ ತೊಂದರೆ. ಹೈಪಾಕ್ಸಿಯಾದಿಂದ ನಮ್ಮ ಶ್ವಾಸಕೋಶವು ಎಳೆದುಕೊಳ್ಳುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಉಸಿರಾಟದಲ್ಲಿ ಏರು ಪೇರಾಗುತ್ತದೆ. ರಕ್ತದಲ್ಲಿನ ಆಮ್ಲಜನಕದ ಒತ್ತಡ 94% ಕ್ಕಿಂತ ಕಡಿಮೆಯಾದರೆ ಅದು ಹೈಪಾಕ್ಸಿಯ. ಆದರೆ, ಹ್ಯಾಪಿ ಹೈಪಾಕ್ಸಿಯದಿಂದ ಬಳಲುವವರಿಗೆ ಹೈಪಾಕ್ಸಿಯದ ಯಾವದೇ ಲಕ್ಷಣಗಳು ಕಾಣಿಸಿಕೊಳ್ಳುವದಿಲ್ಲ. ಸಂಶೋಧನೆ ತಿಳಿಸುವಂತೆ, ಹೆಚ್ಚಾಗಿ ಯುವಜನರಲ್ಲಿ ಈ ಹ್ಯಾಪಿ ಹೈಪಾಕ್ಸಿಯಾ ಕಾಣಿಸಿಕೊಳ್ಳುತ್ತದೆ. ರೋಗಿಗಳು ತಮ್ಮ ಆಮ್ಲಜನಕದ ಮಟ್ಟವು ಕಡಿಮೆಯಾಗುತ್ತಿದೆ ಎಂದು ತಿಳಿಯಲಾರರು. ಅಲ್ಲದೆ, ಅವರು ಯಾವದೇ ಹಸ್ತಕ್ಷೇಪವಿಲ್ಲದೆ ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಅವರಿಗೆ ಯಾವದೇ ಉಸಿರಾಟದ ತೊಂದರೆಯಾಗಲಿ ಅಥವ ಇನ್ನಿತರ ದೈಹಿಕ ತೊಂದರೆಯಾಗಲಿ ಕಾಣಿಸಿಕೊಳ್ಳುವದಿಲ್ಲ. ಆದರೆ, ಇದ್ದÀಕ್ಕಿದ್ದಂತೆ ಅವರ ಆಮ್ಲಜನಕದ ಮಟ್ಟ ತೀರಾ ಕಡಿಮೆಯಾಗಿ ಅವರು ಅಸ್ಥಿರವಾಗುತ್ತಾರೆ. ಇದೇ ಹ್ಯಾಪಿ ಹೈಪಾಕ್ಸಿಯ. ಹಲವಾರು ಸನ್ನಿವೇಶಗಳಲ್ಲಿ ರಕ್ತದಲ್ಲಿನ ಆಮ್ಲಜನಕದ ಒತ್ತಡ 30% ಗೆ ಇಳಿಮುಖ ಕಂಡರೂ ಯಾವದೇ ಲಕ್ಷಣಗಳಿಲ್ಲದ ಕಾರಣ ಹೆಚ್ಚಾಗಿ ಯುವಜನರು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಹ್ಯಾಪಿ ಹೈಪಾಕ್ಸಿಯ ಹೆಚ್ಚಾಗಿ ಯುವಜನತೆಯನ್ನು ಕಾಡುತ್ತಿದ್ದು, ಇದಕ್ಕೆ ಕಾರಣ ಇನ್ನೂ ತಿಳಿಯಬೇಕಿದೆ. ಹ್ಯಾಪಿ ಹೈಪಾಕ್ಸಿಯದಿಂದ ಕೊರೊನಾ ಸೋಂಕಿನ ಲಕ್ಷಣವನ್ನು ಕಂಡುಹಿಡಿಯಲು ವಿಳಂಬವಾಗುತ್ತಿದ್ದು, ಇದರಿಂದ ಹೆಚ್ಚು ಸಾವುಗಳು ಆಗುತ್ತಿವೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಆದ್ದರಿಂದ, ಕೋವಿಡ್ ಸೋಂಕಿತರು - ಹೆಚ್ಚಾಗಿ ಯುವಜನರು, ಆಗಿಂದಾಗೆ ಆಕ್ಸಿಮೀಟರ್‍ನಲ್ಲಿ ತಮ್ಮ ರಕ್ತದಲ್ಲಿನ ಆಮ್ಲಜನಕದ ಒತ್ತಡವನ್ನು ಗಮನಿಸುತ್ತಿರುವದು ಒಳಿತು ಎಂದು ಸಂಶೋಧನೆಗಳು ತಿಳಿಸುತ್ತವೆ. ಇದಲ್ಲದೆ, ತುಟಿಗಳ ಬಣ್ಣ ನೀಲಿ ಬಣ್ಣಕ್ಕೆ ಬದಲಾದರೆ ಅಥವಾ ಯಾವದೇ ಕಾರಣವಿಲ್ಲದೆ ಹೆÀಚ್ಚಾಗಿ ಬೆವರಲಾರಂಭಿಸಿದರೆ . ಇದು ರಕ್ತದಲ್ಲಿನ ಆಮ್ಲಜನಕದ ಒತ್ತಡ ಕಡಿಮೆಯಾಗುತ್ತಿರುವ ಕೆಲವು ಲಕ್ಷಣವನ್ನು ಸೂಚಿಸುತ್ತದೆಂದೂ ಸಂಶೋಧನೆಗಳು ತಿಳಿಸುತ್ತವೆ. - ಪ್ರಜ್ಞಾ ಜಿ.ಆರ್.