ಲೋಕೊಪಯೋಗಿ ಇಲಾಖಾ ಕಚೇರಿ ಈ ಹಿಂದೆ ಬಹಳ ವರ್ಷಗಳಿಂದ ಕೋಟೆ ಆವರಣದೊಳಗಿನ ಅರಮನೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಕಟ್ಟಡ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಅಲ್ಲಿದ್ದ ಎಲ್ಲ ಕಚೇರಿಗಳೊಂದಿಗೆ ಲೋಕೋಪಯೊಗಿ ಇಲಾಖಾ ಕಚೇರಿಯನ್ನು ಕೂಡ ತೆರವುಗೊಳಿಸಲಾಯಿತು. ಇತ್ತ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಬಳಿಯಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಿಸಲಾದ ಹೊಸ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಗೊಳಿಸಲಾಯಿತು. ಇದೀಗ ನೂತನ, ಸುಸಜ್ಜಿತವಾದ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಲೋಕೋಪಯೋಗಿ ಇಲಾಖಾ ನಿವೃತ್ತ ರಾಜ್ಯ ಮುಖ್ಯ ಅಭಿಯಂತರರು. -ಸಂತೋಷ್