ಕುಶಾಲನಗರ, ಮೇ 10: ಕುಶಾಲನಗರದ ವ್ಯಾಪ್ತಿಯ ಕೃಷಿಕರಿಗೆ ತಮ್ಮ ಜಮೀನಿಗೆ ತೆರಳಲು ಅವಕಾಶ ಕಲ್ಪಿಸುವಂತೆ ಸ್ಥಳೀಯ ರೈತಾಪಿ ವರ್ಗ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಹಲವು ಜನ ನೆರೆಯ ಗಡಿಭಾಗ ಕೊಪ್ಪ, ಹಾರ್ನಹಳ್ಳಿ ಹೋಬಳಿ ಪ್ರದೇಶದಲ್ಲಿ ನೂರಾರು ಎಕರೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರಸ್ತುತ ಬೀಜ ಬಿತ್ತುವ ಸಮಯವಾಗಿದೆ. ಕಾರ್ಮಿಕರು ಜಮೀನು ಕೆಲಸ ನಿರ್ವಹಣೆ ಮಾಡುವ ಸಂದರ್ಭದಲ್ಲಿ ತೆರಳಲು ಕೃಷಿ ಇಲಾಖೆಯ ಅನುಮತಿ ಪತ್ರ ಪಡೆದಿದ್ದರೂ ಕುಶಾಲನಗರದ ಗಡಿಭಾಗದಲ್ಲಿ ಪೆÇಲೀಸರು ಅವಕಾಶ ನೀಡುತ್ತಿಲ್ಲ ಎಂದು ಕೃಷಿಕರಾದ ನಿವೃತ್ತ ಯೋಧ ಲಕ್ಷ್ಮಣ, ಸ್ಥಳೀಯರಾದ ಹೆಚ್.ಎನ್ ರಾಮಚಂದ್ರ, ಯೋಗೇಶ್ ತಮ್ಮ ಅಳಲು ತೋಡಿಕೊಂಡರು.ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.