ಮಡಿಕೇರಿ, ಮೇ 10: ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರದ ಫಿಡರ್‍ಗಳಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮೇ 12 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.

ಇಂಡಸ್ಟ್ರಿಯಲ್ ಏರಿಯಾ(ಕುಶಾಲನಗರ), ಹೆಬ್ಬಾಲೆ ಫೀಡರ್‍ಗಳ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.

* ತಾ.13 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂಕನಹಳ್ಳಿ, ಹುದಿಕೇರಿ, ಕಾನೂರು, ಬಿರುನಾಣಿ ಎಕ್ಸ್‍ಪ್ರೆಸ್ ಫೀಡರ್‍ಗಳ ವ್ಯಾಪ್ತಿಯ ಅಂಕನಹಳ್ಳಿ, ಸೀಗೆಮರೂರು, ಕ್ಯಾತನಳ್ಳಿ, ಬೇಗೂರು, ಮುಗುಟಗೇರಿ, ಕಾನೂರು ಕೊತ್ತೂರು, ತೆರಾಲು ಪರಕಟಕೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ.

* ತಾ. 14 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ಕಳ್ಳಿ, ಕೊಡ್ಲಿಪೇಟೆ ಫೀಡರ್‍ಗಳ ವ್ಯಾಪ್ತಿಯ ಬಸವೇಶ್ವರ ರಸ್ತೆ, ವೆಂಕಟೇಶ್ವರ ಬಡಾವಣೆ, ಕೊಡ್ಲಿಪೇಟೆ, ಅವರೆದಾಳು, ಬ್ಯಾಡಗೊಟ್ಟ, ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.

* ಗುಯ್ಯ, ಹೆಗ್ಗಳ, ಮನಜೂರು ಫೀಡರ್‍ಗಳ ವ್ಯಾಪ್ತಿಯ ಪಲ್ಲಕೆರೆ ಗುಯ್ಯ ಶಾಲೆ, ಹೆಗ್ಗಳ ಅರ್ಜಿ, ಪೆರಂಬಾಡಿ, ಮನಜೂರು, ರಾಮಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅಶೋಕ್ ಅವರು ಕೋರಿದ್ದಾರೆ.