*ಸಿದ್ದಾಪುರ ಮೇ 10 : ಕೊಡಗು ಜಿಲ್ಲೆಯಾದ್ಯಂತ ಹಲಸಿನ ಹಣ್ಣು ಘಮಘಮಿಸುವ ಕಾಲ. ಈ ಸಕಾಲವನ್ನೇ ಎದುರು ನೋಡುತ್ತಿದ್ದ ಕಾಡಾನೆಗಳಿಗೆ ಹೊಟ್ಟೆ ತುಂಬಿಸಿ ಕೊಳ್ಳುವ ಅವಸರ. ಇದೇ ಕಾರಣ ದಿಂದ ಇಂದು ವಾಲ್ನೂರು, ತ್ಯಾಗತ್ತೂರು ಮತ್ತು ಅಭ್ಯತ್ ಮಂಗಲ ಭಾಗದಲ್ಲಿ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಟ್ಟಿದೆ.

ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಹಿಂಡು ಹಿಂಡಾಗಿ ಆನೆಗಳು ಕಾಣಿಸಿಕೊಳ್ಳುತ್ತಿದ್ದು, ತೋಟದೊಳಗಿನ ಹಲಸಿನ ಹಣ್ಣುಗಳನ್ನು ಒಂದೂ ಬಿಡದಂತೆ ತಿನ್ನುತ್ತಿವೆ. ಆನೆಗಳ ದಾಳಿಯಿಂದ ತೋಟದ ಗಿಡ, ಮರಗಳು ಸಂಪೂರ್ಣ ನಾಶವಾಗುತ್ತಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರ ಪ್ರದೀಪ್ ಕೃಷ್ಣಪುರ ಒತ್ತಾಯಿಸಿ ದ್ದಾರೆ. ಈ ಹಿಂದೆ ಕಾಡಾನೆ ಗಳಿಂದಾದ ನಷ್ಟಕ್ಕೆ ಇಲ್ಲಿಯವರೆಗೆ ಪರಿಹಾರ ದೊರೆತ್ತಿಲ್ಲ, ಇನ್ನಾದರೂ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಸರ್ಕಾರದೊಂದಿಗೆ ವ್ಯವಹರಿಸಿ ನಷ್ಟ ಭರಿಸಬೇಕೆಂದು ಮನವಿ ಮಾಡಿದ್ದಾರೆ.