ಪಾಲಿಬೆಟ್ಟ, ಮೇ 10: ಕೊರೊನಾ ವೈರಸ್‍ನಿಂದ ಸಂಕಷ್ಟಕ್ಕೊಳಗಾಗಿ ಸೀಲ್‍ಡೌನ್ ವ್ಯಾಪ್ತಿಯಲ್ಲಿರುವ ಪಾಲಿಬೆಟ್ಟ, ಹೊಸೂರು ಗ್ರಾಮ ಪಂಚಾಯಿತಿ ಭಾಗದ 50ಕ್ಕೂ ಹೆಚ್ಚು ಕುಟುಂಬಗಳಿಗೆ ಪಾಲಿಬೆಟ್ಟ ಬಿಜೆಪಿ ಸಮಿತಿ ವತಿಯಿಂದ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಯಿತು. ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಹೊಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಿ ಚಿಣ್ಣಪ್ಪ, ಪ್ರಮುಖರಾದ ನರಸಿಂಹ, ಮಾದು ಸೇರಿದಂತೆ ಮತ್ತಿತರರು ಹಾಜರಿದ್ದರು.