ನಾಪೆÇೀಕ್ಲು, ಮೇ 9: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ತಾ. 10ರಿಂದ 24ರ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದ್ದು, ಪ್ರತೀ ದಿನ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಅನುವು ಮಾಡಲಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವ ಹಿನೆÀ್ನಲೆಯಲ್ಲಿ ವಾರದಲ್ಲಿ ಎರಡು ದಿನ, ಅಂದರೆ ಸೋಮವಾರ ಮತ್ತು ಶುಕ್ರವಾರ ಬೆಳಿಗ್ಗೆ 6ರಿಂದ 12 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಇದರಿಂದ ಹೆಚ್ಚಿನ ಜನದಟ್ಟಣೆ ಉಂಟಾಗುತ್ತಿದೆ ಎಂಬುದು ಸಾರ್ವಜನಿಕರ ವಾದವಾಗಿದೆ.

ಇದಕ್ಕೆ ಸಾಕ್ಷಿ ತಾ. 7ರ ಶುಕ್ರವಾರ ನಾಪೆÇೀಕ್ಲು, ಮಡಿಕೇರಿ, ವೀರಾಜಪೇಟೆ, ಸೇರಿದಂತೆ ಜಿಲ್ಲೆಯ ಇತರೆಡೆ ಉಂಟಾದ ಟ್ರಾಫಿಕ್ ಜಾಮ್ ಮತ್ತು ಜನದಟ್ಟಣೆ. ಆದುದರಿಂದ ವಾರದ ಎಲ್ಲಾ ದಿನವು ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಅವಕಾಶ ನೀಡಿದರೆ ಜನದಟ್ಟಣೆ ಕಡಿಮೆಯಾಗಬಹುದು ಎನ್ನುವದು ಜನಾಭಿಪ್ರಾಯ. ಈಗಾಗಲೇ ಹಾಲು ಮತ್ತು ಪೇಪರ್ ತೆಗೆದುಕೊಳ್ಳಲು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶವಿದೆ. ಇದರೊಂದಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲು ಜಿಲ್ಲಾಡಳಿತ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕೊರೊನಾ ಸೋಂಕಿತರ ಮನೆಗೆ ರಿಬ್ಬನ್ ಕಟ್ಟುವುದನ್ನು ಬಿಟ್ಟರೆ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಅವರ ಬಗ್ಗೆ ಯಾವುದೇ ನಿಗಾ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಸೋಂಕಿತರಿಗೆ ಅಗತ್ಯ ವಸ್ತುಗಳ ಪೂರೈಕೆ ಸೇರಿದಂತೆ ಯಾವುದೇ ಬೇಕುಬೇಡಗಳ ಬಗ್ಗೆ ಯಾರೂ ವಿಚಾರಿಸುತ್ತಿಲ್ಲ.

-ಪಿ.ವಿ.ಪ್ರಭಾಕರ್