ಗೋಣಿಕೊಪ್ಪ ವರದಿ, ಮೇ 9: ಇಲ್ಲಿನ ಪಟೇಲ್ ನಗರದ ನಿವಾಸಿ ಮೊಹಮ್ಮದ್ ರಫೀಕ್ ಅವರ ಪುತ್ರ ಸಾದಿಕ್ (21) ಏಪ್ರಿಲ್ 27 ರಿಂದ ಕಾಣೆಯಾಗಿದ್ದಾರೆ. ಸುಮಾರು 5.7 ಅಡಿ ಎತ್ತರ, ಬಿಳಿ ಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಟ್ರ್ಯಾಕ್ ಪ್ಯಾಂಟ್, ಟಿ. ಶರ್ಟ್ ತೊಟ್ಟಿದ್ದ. ಮಲಯಾಳಂ, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ತಿಳಿದಿದೆ.

ಮೈಸೂರು ವಿದ್ಯಾವರ್ಧಕ ಕಾಲೇಜಿನಲ್ಲಿ 2ನೇ ವರ್ಷದ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಯಾಗಿದ್ದು, ಏಪ್ರಿಲ್ 27 ರಂದು ಪಟೇಲ್ ನಗರದಲ್ಲಿರುವ ಮನೆಯಿಂದ ನೋಟ್‍ಬುಕ್ ತರಲು ತಂದೆಯಿಂದ 100 ರೂ. ಕೇಳಿಕೊಂಡು ಸ್ಕೂಟರ್‍ನಲ್ಲಿ ಹೋದವನು ಮರಳಿ ಬಂದಿಲ್ಲ. ಈ ಬಗ್ಗೆ ಫೋನ್ ಮಾಡಿ ಕೇಳಿದಾಗ ಪಾಲಿಬೆಟ್ಟದಲ್ಲಿ ಇದ್ದೇನೆ ಬರುತ್ತೇನೆ ಎಂದು ತಿಳಿಸಿದ್ದ. ನಂತರ ನನ್ನನ್ನು ಹುಡುಕಬೇಡಿ ನಾನು ಬರುತ್ತೇನೆ ಎಂದು ತಿಳಿಸಿದ್ದಾನೆ. ಆದರೂ ಮನೆಗೆ ಬಂದಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಲಾಗಿದ್ದು, ಸಂಪರ್ಕಕ್ಕೂ ಸಿಗುತ್ತಿಲ್ಲ. ಹುಡುಕಿಕೊಡಿ ಎಂದು ತಂದೆ ರಫೀಕ್ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈತ ಪತ್ತೆಯಾದಲ್ಲಿ ಈ ದೂರವಾಣಿ ಸಂಖ್ಯೆಗೆ 08274 247333 ಮಾಹಿತಿ ನೀಡಬಹುದಾಗಿದೆ ಎಂದು ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.