ಪೆÇನ್ನಂಪೇಟೆ. ಮೇ.9: ಪೆÇನ್ನಂಪೇಟೆ ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೆÇನ್ನಂಪೇಟೆ ಪೆÇಲೀಸ್ ಠಾಣೆ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ಸೋಮವಾರ ಮತ್ತು ಶುಕ್ರವಾರ ಪಟ್ಟಣಕ್ಕೆ ದಿನನಿತ್ಯ ವಸ್ತುಗಳ ಖರೀದಿ ಮಾಡಲು ಬರುವ ಸಾರ್ವಜನಿಕರ ವಾಹನ ನಿಲುಗಡೆಗೆ ಪಟ್ಟಣದ ಹೊರ ಭಾಗದಲ್ಲಿ ಸ್ಥಳ ನಿಗದಿ ಪಡಿಸಲಾಗಿದೆ. ಕಾನೂರು ಕಡೆಯಿಂದ ಬರುವ ವಾಹನಗಳ ನಿಲುಗಡೆ ಪೆÇನ್ನಂಪೇಟೆ ಕಾನೂರು ಜಂಕ್ಷನ್‍ನಿಂದ ಹಿಂದಕ್ಕೆ ಒಂದು ಬದಿಯಲ್ಲಿ, ಹುದಿಕೇರಿ ಕಡೆಯಿಂದ ಬರುವ ವಾಹನಗಳಿಗೆ ಹುದಿಕೇರಿ ರಸ್ತೆ ಕಾನೂರು ಜಂಕ್ಷನ್ ಹಿಂದಕ್ಕೆ ಒಂದು ಬದಿಯಲ್ಲಿ ಕುಂದ ಕಡೆಯಿಂದ ಬರುವ ವಾಹನಗಳಿಗೆ ಕುಂದ ರಸ್ತೆ ಮತ್ತಪ್ಪ ದೇವಸ್ಥಾನದಿಂದ ಹಿಂದಕ್ಕೆ ಒಂದು ಬದಿಯಲ್ಲಿ, ಗೋಣಿಕೊಪ್ಪ ಕಡೆಯಿಂದ ಬರುವ ವಾಹನಗಳಿಗೆ ಜೂನಿಯರ್ ಕಾಲೇಜಿನಿಂದ ಹಿಂದಕ್ಕೆ ರಸ್ತೆಯ ಒಂದು ಬದಿಯಲ್ಲಿ, ಬಾಳೆಲೆ ಕಡೆಯಿಂದ ಬರುವ ವಾಹನಗಳಿಗೆ ಜೂನಿಯರ್ ಕಾಲೇಜಿನ ರಸ್ತೆ ಒಂದು ಬದಿಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಕಿರುಗೂರು ಕಡೆಯಿಂದ ಸಾಯಿಶಂಕರ್ ಶಾಲೆ ರಸ್ತೆಯಲ್ಲಿ ಬರುವ ವಾಹನಗಳಿಗೆ ಟಿ. ಆರ್. ರಸ್ತೆಯ ಒಂದು ಬದಿಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಅಲ್ಲಿಂದ ಕಾಲ್ನಡಿಗೆಯಲ್ಲಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಅನಾವಶ್ಯಕವಾಗಿ ಯಾವುದೇ ವಾಹನಗಳು ಮತ್ತು ಸಾರ್ವಜನಿಕರು ಪೆÇನ್ನಂಪೇಟೆ ಪಟ್ಟಣದಲ್ಲಿ ಸಂಚರಿಸುವುದು ಕಂಡುಬಂದರೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಪೆÇಲೀಸ್ ಪ್ರಕಟಣೆ ತಿಳಿಸಿದೆ.