ನಾಪೆÇೀಕ್ಲು, ಮೇ 9: ನಾಪೆÇೀಕ್ಲು ಪಟ್ಟಣದಲ್ಲಿ ಅನಾವಶ್ಯಕವಾಗಿ ತಿರುಗಾಡುವವರಿಗೆ ಲಾಠಿ ರುಚಿ ತೋರಿಸುವುದರೊಂದಿಗೆ ಅನಗತ್ಯ ಓಡಾಡುವ ವಾಹನಗಳನ್ನು ಮುಟ್ಟುಗೋಲು ಹಾಕಿ ಪ್ರಕರಣ ದಾಖಲಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ. ಈಗಾಗಲೇ 6 ಪಿಕ್‍ಅಪ್, 5 ಕಾರು, 3 ಬೈಕ್ ಹಾಗೂ ಒಂದು ಲಾರಿ ಸೇರಿದಂತೆ 15 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಾಪೆÇೀಕ್ಲು ಠಾಣಾಧಿಕಾರಿ ಆರ್.ಕಿರಣ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಮಂಗಳವಾರ ಮತ್ತು ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಕೊಟ್ಟಮುಡಿ ಕಡೆಯಿಂದ ಬರುವ ವಾಹನಗಳನ್ನು ನಾಪೆÇೀಕ್ಲು ಪ್ರೌಢಶಾಲಾ ಮೈದಾನ. ಕಕ್ಕಬ್ಬೆ, ನೆಲಜಿ ಕಡೆಯಿಂದ ಬರುವ ವಾಹನಗಳನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನ. ಪಾರಾಣೆ ಕೈಕಾಡು ಕಡೆಯಿಂದ ಬರುವ ವಾಹನಗಳನ್ನು ಬೇತು ಶಾಲಾ ಮೈದಾನದಲ್ಲಿ ನಿಲುಗಡೆಗೆ ನಾಪೆÇೀಕ್ಲು ಪೆÇಲೀಸ್ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.