ಇದೊಂದು ಉತ್ತಮ ಲೇಖನ. ಲೇಖನದಲ್ಲಿ ಬರೆದಂತೆಯೇ ಮಹಾಭಾರತದ ಕೊನೆಯ ಅಧ್ಯಾಯದಲ್ಲು ಕೂಡ, ಚಿರಂಜೀವಿಯಾದ ಅಶ್ವತ್ಥಾಮನಿಗೆ ಕೃಷ್ಣ ಪರಮಾತ್ಮನು ಕೊಟ್ಟ ಶಾಪವು ಕೂಡಾ ಇದೆ ಆಗಿರಬಹುದಲ್ಲವೆ?

ಪಾಂಡವರ ಕುಡಿಯೊಂದು ಅಭಿಮನ್ಯುವಿನ ಹೆಂಡತಿಯ ಉದರದಲ್ಲಿ ಬೆಳೆಯುತ್ತಿರಲು, ಆ ಕುಡಿಯನ್ನು ಅಶ್ವತ್ಥಾಮನು ಹೊಸಕುತ್ತಾನೆ. ಇಡಿಯ ಮಹಾಭಾರತದ ಯುದ್ಧದಲ್ಲಿ ಆದ ನೋವಿಗಿಂತ ಆದ ಮಹಾ ಅಪರಾಧವನ್ನು ಸಹಿಸಲು ಕೃಷ್ಣ ಪರಮಾತ್ಮನು, ಪ್ರತಿ ಶತಮಾನದಲ್ಲೂ ನೀನು ಸಾಯಬೇಕೆಂದರು. ಸಾಯದೆ, ಸಾವು ಕೂಡ ನಿನ್ನ ಹತ್ತಿರ ಬಾರದೆ, ನೀನು ಪ್ರತಿ ಜೀವಿಯನ್ನು ಹೊಕ್ಕು, ಅವರು ಸತ್ತರು ನೀ, ಸಾಯದೆ ಬದುಕಬೇಕೆಂಬ ಶಾಪವನ್ನು ಹಾಕುತ್ತಾನೆ. ಅದು ಹೀಗೇ ಆಗಿರಬೇಕಲ್ಲವೆ? ಪ್ರತಿ ಶತಮಾನದಲ್ಲೂ ಭುವಿಯಲ್ಲಿ ಕಾಣುವ ಸಂಕಷ್ಟವೇ ಈ ಅಶ್ವತ್ಥಾಮನೆ? - ಸುಳ್ಳಿಮಾಡ ಶಿಲ್ಪ, ವೀರಾಜಪೇಟೆ.