ಮಡಿಕೇರಿ, ಮೇ ೮: ತಲಕಾವೇರಿಯಲ್ಲಿ ಹೊರಗೆ ಇರಿಸಲ್ಪಟ್ಟಿರುವ ಅಗಸ್ತö್ಯ ಪ್ರತಿಷ್ಠಿತ ಭಗ್ನಗೊಂಡ ಶಿವಲಿಂಗದ ಕುರಿತು ಯಾವ ರೀತಿ ನಿರ್ಧಾರ ತಾಳಬೇಕು ಎನ್ನುವ ಬಗ್ಗೆ ಧಾರ್ಮಿಕ ಪರಿಷತ್ ಕಾರ್ಯೋನ್ಮುಖವಾಗಿದೆ. ಇಂದು ಈ ಕುರಿತಾಗಿ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಸಂಪಾದಕೀಯವನ್ನು ಗಮನಿಸಿದ ಪರಿಷತ್‌ನ ರಾಜ್ಯ ಸಮಿತಿ ಸದಸ್ಯರು ಹಾಗೂ ಕೊಡಗು ಉಸ್ತ್ತುವಾರಿಯೂ ಆಗಿರುವ ಗೋವಿಂದಭಟ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಅವರು ಈ ಮಾಹಿತಿಯೊದಗಿಸಿದರು.

ಈಗಾಗಲೇ ಆ ಶಿವಲಿಂಗದ ಬಗ್ಗೆ ತಿಳಿಯಲು ನಿಯೋಗವೊಂದು ಸ್ಥಳಕ್ಕೆ ಬಂದು ಪರಿಶೀಲಿಸಲಾಯಿತು. ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮತ್ತು ಅರ್ಚಕರು ಮೊದಲಾದವರೊಂದಿಗೆ ಚರ್ಚಿಸ ಲಾಗಿತ್ತು. ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷರೂ, ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಸಚಿವರೂ ಆಗಿರುವ ಕೋಟ ಶ್ರೀನಿವಾಸ್ ಪೂಜಾರಿ ಅವರ ಗಮನಕ್ಕೂ ಬಂದಿದೆ.

ಶಿವಲಿAಗದ ವಿಸರ್ಜನೆಯಿರ ಬಹುದು ಅಥವ ಪುನರ್ ಪ್ರತಿಷ್ಠಾಪನೆಯಿರಬಹುದು- ಯಾವದೇ ನಿರ್ಧಾರ ವನ್ನು ಏಕಾಏಕಿ ತೆಗೆದು ಕೊಳ್ಳಲು ಸಾಧ್ಯವಿಲ್ಲ. ಈ ಸಂಬAಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ವಕೀಲರಾದ ಓ. ಶ್ಯಾಂ ಭಟ್ ಅವರನ್ನು ಕೂಡ ಈಗಾಗಲೇ ಸಂಪರ್ಕಿಸಲಾಗಿದೆ. ಅವರ ಸಹಕಾರವನ್ನೂ ಪಡೆದು ಮುಂದಿನ ಕಾರ್ಯ ನಿರ್ವಹಿಸ ಬೇಕಾಗಿದೆ. ಅವರು ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲು ತಯಾರಿದ್ದಾರೆ. ಆದರೆ, ಶಿವಲಿಂಗದ ಬಗ್ಗೆ ತೀರ್ಮಾನವನ್ನು ಧಾರ್ಮಿಕ ವಿಧಿವಿಧಾನಗಳ ಮಾರ್ಗದರ್ಶನದಲ್ಲಿ ಕೈಗೊಳ್ಳುವಂತೆ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದೀಗ ಹೊರಗೆ ಇರಿಸಲ್ಪಟ್ಟಿರುವ ಶಿವಲಿಂಗದ ಕುರಿತು ದಿಢೀರ್ ನಿರ್ಧಾರ ಕೈಗೊಳ್ಳುವದು ಅಸಾಧ್ಯ. ಈ ಬಗ್ಗೆ ಅನಿವಾರ್ಯ ವಾಗಿ ಮುಂದೆ ಪ್ರತ್ಯೇಕ ಅಷ್ಟಮಂಗಲ ಪ್ರಶ್ನೆಯೊಂದನ್ನು ಇರಿಸಿ ಜ್ಯೋತಿಶ್ಶಾಸ್ತçಜ್ಞರಿಂದ ಸೂಕ್ತ ಮಾರ್ಗದರ್ಶನ ಪಡೆಯಬೇಕಿದೆ. ಜೊತೆಗೆ, ಜಿಲ್ಲೆಯ ಹಿರಿಯರು, ಜನಪ್ರತಿನಿಧಿಗಳು ಮತ್ತು ಧಾರ್ಮಿಕ ಪ್ರಮುಖರೊಂದಿಗೂ ಚರ್ಚಿಸಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವದು ಎಂದು ಗೋವಿಂದ ಭಟ್ ಖಚಿತಪಡಿಸಿದರು. ಇದೀಗ ರಾಜ್ಯದಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ಕೊರೊನ ಸೋಂಕು ಅಧಿಕವಿರುವದರಿಂದ ಇದು ಸ್ವಲ್ಪ ತಣ್ಣಗಾದ ಮೇಲೆ ಮುಕ್ತ ವಾತಾವರಣದಲ್ಲಿ ಚರ್ಚಿಸಿ, ಧಾರ್ಮಿಕ ಮಾರ್ಗದರ್ಶನವನ್ನು ಪಡೆದು ತೀರ್ಮಾನಿಸುವದಾಗಿ ಅವರು ಭರವಸೆಯಿತ್ತರು. - ಶ್ರೀಸುತ