ಮಾನ್ಯರೆ, ಕೊಡಗಿಗೆ ಎರಡು ಎಂ.ಎಲ್.ಎ. ಸ್ಥಾನಗಳಿದ್ದು, ಕಳೆದ 20 ವರ್ಷಗಳಿಂದ ಬಿ.ಜೆ.ಪಿ.ಯಿಂದಲೇ ನಿರಂತರವಾಗಿ ಇಬ್ಬರು ಎಂ.ಎಲ್.ಎ.ಗಳು ಚುನಾಯಿತರಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳಾದ ಆನೆ, ಹುಲಿ, ಚಿರತೆ, ಕರಡಿ ಇತ್ಯಾದಿ ಪ್ರಾಣಿಗಳು ಹಳ್ಳಿಗಳಿಗೆ ಧಾವಿಸಿ ಮಾನವ ಮತ್ತು ಸಾಕುಪ್ರಾಣಿ ಜೀವಹಾನಿ ಮಾಡುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆಯೇ ಇತರ ಸಸ್ಯಹಾರಿ ಪ್ರಾಣಿಗಳು ಹಳ್ಳಿಗೆ ನುಗ್ಗಿ ಕೋಟ್ಯಾಂತರ ರೂಪಾಯಿ ಬೆಳೆನಾಶ ಮಾಡುತ್ತಿವೆ.

ಮಾರ್ಚ್ ತಿಂಗಳಲ್ಲಿ ದಕ್ಷಿಣ ಕೊಡಗಿನ ಬೆಳ್ಳೂರು ಗ್ರಾಮದ ತೋಟ ಮಾಲೀಕರೊಬ್ಬರ ನೌಕರನ ಮೊಮ್ಮಗನನ್ನು ಹುಲಿಯೊಂದು ಕೊಂದು ಹಾಕಿತು. ಆ ದಿನವೇ ಆ ಮಗುವಿನ ಅಜ್ಜ ಕೆಂಚಶೆಟ್ಟಿ ಎಂಬುವವರ ಮೇಲೆ ಹುಲಿ ದಾಳಿ ಮಾಡಿ, ಗಾಯಗೊಳಿಸಿತು. ಈ ತರಹದ ಆತಂಕಕಾರಿ ವಾತಾವರಣದಲ್ಲಿ ಜನರ ಇಚ್ಚೆಇಷ್ಟೆ ನಮ್ಮ ಜಿಲ್ಲೆಯವರೇ ಮಂತ್ರಿಗಳಾದಲ್ಲಿ, ಅದರಲ್ಲೂ ಓರ್ವ ಅರಣ್ಯಮಂತ್ರಿ ಆದಲ್ಲಿ ಬಹಳ ಉಪಯೋಗವಾಗುತ್ತದೆ.

ಅತೀ ಶೀಘ್ರ ಕೊಡಗಿನವರೇ ಆದ ಓರ್ವ ಜನಪ್ರತಿನಿಧಿಯನ್ನು ಅರಣ್ಯ ಮಂತ್ರಿಗಳಾಗಿ ಮಾಡಬೇಕಾಗಿ ಮುಖ್ಯಮಂತ್ರಿಗಳಲ್ಲಿ ವಿನಂತಿ.

- ಕಿಗ್ಗಟ್ಟ್‍ನಾಡ್ ಹಿರಿಯ ನಾಗರಿಕ ವೇದಿಕೆ, ಪೊನ್ನಂಪೇಟೆ.