ಬೆಂಗಳೂರು, ಮೇ 9: ಕೊರೊನಾ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ತಾ. 10 ರಿಂದ (ಇಂದಿನಿಂದ) ಮೇ 24 ರವರೆಗೆ ಸಂಪೂರ್ಣ ಲಾಕ್‍ಡೌನ್‍ನ್ನು ಸರ್ಕಾರ ಘೋಷಿಸಿದೆ. ಸಾಮಗ್ರಿ ತರಲೆಂದು, ಅವರಿವರನ್ನು ಕಾಣಲೆಂದು ಪ್ರತಿದಿನ ಬೆಳಿಗ್ಗೆ 10 ಗಂಟೆ ನಂತರ ಸುಖಾಸುಮ್ಮನೆ ರಸ್ತೆಗಿಳಿದರೆ ಪೆÇಲೀಸರಿಂದ ಲಾಠಿ ಏಟಿನ ರುಚಿ ತಿನ್ನಬೇಕಾಗಬಹುದು. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಸಾರ್ವಜನಿಕರು ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಹತ್ತಿರದ ಅಂಗಡಿಗಳಿಗೆ ಹೋಗಬಹುದು, ನಂತರ ಜನರ, ವಾಹನ ಓಡಾಟಕ್ಕೆ ಸಂಪೂರ್ಣ ಲಾಕ್‍ಡೌನ್ ಬೀಳಲಿದೆ. ಅಂತರ ಜಿಲ್ಲೆ, ಅಂತರ ರಾಜ್ಯ ಸಂಚಾರ ಎಲ್ಲವೂ ಬಂದ್. ಯಾರಾದರೂ ಕುಂಟುನೆಪ ಒಡ್ಡಿ ಅನಗತ್ಯವಾಗಿ ಮನೆಯಿಂದ ಆಚೆ ಬಂದರೆ, ವಾಹನವನ್ನು ರಸ್ತೆಗಿಳಿಸಿದರೆ ಪೆÇಲೀಸರಿಂದ ತಕ್ಕ ಶಿಕ್ಷೆ ಎದುರಿಸಬೇಕಾಗುವುದು ಖಂಡಿತ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಜನರು ಹೊರಗೆ ಓಡಾಡುವುದು ಹೆಚ್ಚು, ಜನಸಂಖ್ಯೆಯೂ ಇಲ್ಲಿ ಹೆಚ್ಚಿರುವುದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದನ್ನು, ಜನರನ್ನು ನಿಯಂತ್ರಿಸುವುದು ಪೆÇಲೀಸರಿಗೆ ಹರಸಾಹಸವಾಗುತ್ತದೆ. ಈ ಸಮಯದಲ್ಲಿ ನಾಳೆಯಿಂದ ಜಾರಿಯಾಗುವ ಲಾಕ್‍ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಿ, ಎಲ್ಲರೂ ಸಹಕರಿಸಿ, ಲಾಕ್‍ಡೌನ್ ಉಲ್ಲಂಘಿಸಿದ್ದು ಕಂಡು ಬಂದರೆ, ಅನಗತ್ಯವಾಗಿ ಹೊರಗೆ ಓಡಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.