ಗುವಾಹತಿ, ಮೇ 9: ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಗುವಾಹತಿಯಲ್ಲಿ ಇಂದು ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇಂದು ಬೆಳಿಗ್ಗೆಯಷ್ಟೇ ತಮ್ಮ ಸಿಎಂ ಸ್ಥಾನಕ್ಕೆ ಸರ್ಬಾನಂದ ಸೋನೋವಾಲ್ ಅವರು ರಾಜೀನಾಮೆ ನೀಡಿದ್ದರು. ಗವರ್ನರ್ ಜಗದೀಶ್ ಮುಖಿ ಅವರನ್ನು ಭೇಟಿ ಮಾಡಿದ್ದ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದು, ಈ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.ಸಿದ್ದೇ ಬಂತು.

ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ‘ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ’ ಎಂಬಂತೆ ಕೊರೊನಾದ ಪುನರಾವರ್ತನೆ ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಲಾರಂಭಿಸಿದೆ. ಇದೆಲ್ಲಾ ನಾವು ಕಳೆದ ಸಂಕಷ್ಟದ ದಿನಗಳನ್ನು ಮರೆತು ಮೈಮರೆತು ವರ್ತಿಸಿಸುದರ ಪ್ರತಿಫಲವಿಲ್ಲದೆ ಬೇರೇನೂ ಅಲ್ಲ.

‘ಕೆಟ್ಟಮೇಲೆ ಬುದ್ಧಿ ಬಂತು’ ಎಂಬ ಹಳೆಯ ಗಾದೆ ಮಾತೊಂದಿದೆ. ಆದರೆ ಕೆಟ್ಟರೂ ಬುದ್ಧಿ ಬರಲಿಲ್ಲವಲ್ಲಾ ಎಂಬುದನ್ನು ಅವಲೋಕಿಸಿದರೆ ನಾವು ಹುಲುಮಾನವರ ಮೊಡ್ಡುತನಕ್ಕೆ ಒಂದಿಷ್ಟು ಬೆಂಕಿ ಹಾಕಲೇ ಬೇಕಲ್ಲಾ? ಇದು ಯಾವ ಪರಿ ಮೈಮರೆವು? ಇದ್ಯಾವ ಪರಿ ನಮ್ಮ ಹಠಮಾರಿತನ? ಹೆಮ್ಮಾರಿ ನಮ್ಮ ಹಿಂದೆಯೇ ಕರಿನೆರಳಿನಂತೆ ಹಿಂಭಾಲಿಸುತ್ತಿದ್ದರೂ ನಾವು ಅರಿಯದೇ ಮೈಮರೆತು ವರ್ತಿಸಿದರ ದುಷ್ಪರಿಣಾಮವನ್ನು ಇಂದು ಎದುರಿಸಬೇಕಾಗಿದೆ.

ಇದೀಗ ಹೆಮ್ಮಾರಿ ನಮ್ಮೆಲ್ಲರ ಮನೆಯ ಕದ ತಟ್ಟಲಾರಂಭಿಸಿದೆ. ನಾವೆಲ್ಲಾ ಒಂದಾಗಿ ಎದುರಿಸಿ ಅದನ್ನು ಹಿಮ್ಮೆಟ್ಟಿಸುವುದೇ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪೊಲೀಸರ ಕರ್ತವ್ಯ ಅಥವಾ ಸರಕಾರದ ಕರ್ತವ್ಯ ಎಂದು ಉದಾಸೀನತೆಯಿಂದ ವರ್ತಿಸಿ, ಮೈಮರೆತು ನಡೆದರೆ ನಮ್ಮ ಸಾವಿನ ಗುಂಡಿಯನ್ನು ನಾವೇ ತೋಡಿದಂತೆ ಆಗುವುದಂತೂ ನಿಸ್ಸಂಶಯ!

ಸಂಬಂಧಿಸಿದ ಎಲ್ಲಾ ಇಲಾಖೆಯವರೊಡನೆ ಸೂಕ್ತವಾಗಿ ಸ್ಪಂದಿಸಲೇಬೇಕಾಗಿದೆ. ಹೆಮ್ಮಾರಿ ಮತ್ತೊಮ್ಮೆ ಹುಚ್ಚೆದ್ದು ರುದ್ರನರ್ತನಗೈಯ್ಯುವುದರೊಳಗೇ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕಾಗಿದೆ. ಇದು ಸಾಧ್ಯವಾಗುವುದು ನಾವೆಲ್ಲಾ ಮಾನವರಾದರೆ ಮಾತ್ರ, ದಾನವರಾಗುವುದರಿಂದ ಖಂಡಿತಾ ಸಾಧ್ಯವಿಲ್ಲ.

ಅದಕ್ಕೆ ಮೊತ್ತೆಮ್ಮೆ ಹೇಳಲಿಚ್ಚಿಸುತ್ತೇನೆ, ನಾವು ಒಮ್ಮೆ ಎಡವಿದ್ದಾಯಿತು ಪದೇ ಪದೇ ಎಡವುವುದು ಬೇಡ. ನಮ್ಮ ಎಚ್ಚರಿಕೆಯಲ್ಲಿ ಮುಂದಕ್ಕಾದರೂ ನಾವೆಲ್ಲಾ ಇರೋಣ. ಕೊರೊನಾದ ದುಷ್ಪರಿಣಾಮಗಳನ್ನು ಎದುರಿಸಲು ಸಂಘಟಿತರಾಗೋಣ. ಆಪತ್ತು ನಮ್ಮ ಮುಂದಿದೆ. ಆಪತ್ತ್‍ಬಾಂಧವರು ಹೇಳಿದಂತೆ ನಡೆಯೋಣ.

- ಎಸ್.ಯಂ. ವಿಶ್ವನಾಥ್, ಮಾಯಮುಡಿ.